ಶನಿವಾರ, ಅಕ್ಟೋಬರ್ 8, 2011

"ಈಶಾವಾಸ್ಯಮ್"




ಸತ್ಸಂಗಕ್ಕಾಗಿ ನನ್ನ ಮನೆಯ ಮೇಲೊ೦ದು ಹಾಲ್ ನಿರ್ಮಾಣ ಮಾಡಬೇಕೆಂಬ  ಮಹದಾಸೆ. ಭಗವಂತನ ಕೃಪೆಯಿಂದ ಅದು ನೆರವೇರಿದೆ. ಬರುವ ನವಂಬರ್ ೨ ರಂದು "ಈಶಾವಾಸ್ಯಮ್"  ಪ್ರವೇಶೋತ್ಸವವು ನಿಶ್ಚಯ ವಾಗಿದೆ. ಅಷ್ಟರಲ್ಲಿ ಅನಾಯಾಸವಾಗಿ ಲಭ್ಯವಾದ ಅವಕಾಶವನ್ನು ಉಪಯೋಗಿಸಿಕೊಳ್ಳ ಬಾರದೇಕೆ?  ಎಂಬ ಆಲೋಚನೆಯ ಪರಿಣಾಮ , ನಿನ್ನೆ ವಿಜಯದಶಮಿಯ ಶುಭ ದಿನ ದಂದು ಒಂದು  ದಿಢೀರ್ ಸತ್ಸಂಗವು ಅದೇ ಹಾಲ್ ನಲ್ಲಿ ನಡೆಯಿತು.  ಹಾಸನದ  ಶಂಕರ ಮಠಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಬೆಂಗಳೂರು ಜೆ.ಪಿ.ನಗರ ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರನ್ನು ನಮ್ಮ ನಿರ್ಮಾಣ ಹಂತದ ಸತ್ಸಂಗದ ಹಾಲ್ ಗೆ ಆಹ್ವಾನಿಸಿದೆ. ಪೂಜ್ಯರು ಸಂತೋಷದಿಂದ ಆಗಮಿಸಿ ಸತ್ಸಂಗವನ್ನು ನಡೆಸಿ ಕೊಟ್ಟರು. ಅದರ ಕೆಲವು ದೃಶ್ಯಗಳು ಇಲ್ಲಿವೆ. 

ಶನಿವಾರ, ಅಕ್ಟೋಬರ್ 1, 2011

ವಿಶ್ವದ ಯಾವ ಯಾವ ದೇಶದಿಂದ ಭೇಟಿ ನೀಡಿದ್ದಾರೆಂಬ ಮಾಹಿತಿ.

ನನಗೆ ಆಶ್ಚರ್ಯ ಆಗ್ತಾ ಇದೆ!  ನನ್ನ ಕುಟುಂಬ ದ ಬ್ಲಾಗನ್ನೂ   ಕೂಡ ವಿಶ್ವದ ಹಲವಾರು ದೇಶಗಳಲ್ಲಿ ನೋಡ್ತಾರೆ! ಹೋಗಲೀ, ಏನೋ ಅಚಾನಕ್ ಆಗಿ ಇಲ್ಲಿ ಬಂದರು, ಅನ್ನುವಂತಿಲ್ಲ. ಕಾರಣ ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳಲ್ಲಿ ಸಾಮಾನ್ಯವಾಗಿ ನಿತ್ಯವೂ ನೋಡುತ್ತಿದ್ದಾರೆ. ಅಂದರೆ ಬಹುಪಾಲು ಕನ್ನಡಿಗರು, ಅದರಲ್ಲೂ ನಮ್ಮ ಸಂಬಂಧಿಕರೂ ಇರಬಹುದು. ಅಥವಾ ಇಂತಾ ವಿಚಾರಗಳಲ್ಲಿ ಆಸಕ್ತರು ಇರಬಹುದು. ನಾನು ಅಂತವರಲ್ಲಿ ಒಂದು ವಿನಂತಿ ಮಾಡಿಕೊಳ್ಳುವೆ. ದಯಮಾಡಿ ವೇದಸುಧೆಗೆ ನಿಮ್ಮ ಪರಿಚಯ ಮಾಡಿಕೊಡಿ. ಒಂದು ಮೇಲ್ ಮಾಡಿ. ಇಲ್ಲಿ ನೋಡಿ ವಿಶ್ವದ ಯಾವ ಯಾವ ದೇಶದಿಂದ ಭೇಟಿ ನೀಡಿದ್ದಾರೆಂಬ ಮಾಹಿತಿ. 
ಭಾರತ
2599
ಬ್ರಿಟನ್/ಇಂಗ್ಲೆಂಡ್
284
ಅಮೇರಿಕಾ ಸಂಯುಕ್ತ ಸಂಸ್ಥಾನ
169
ಮಲೇಶಿಯಾ
53
ಆಸ್ಟ್ರೇಲಿಯ
36
ಕೆನಡಾ
23
ಸಂಯುಕ್ತ ಅರಬ್ ಎಮಿರೇಟಸ್
22
ಜರ್ಮನಿ
15
ದಕ್ಷಿಣ ಕೋರಿಯಾ
15
ರಶಿಯಾ
11