ಕಂಠಿ ಮಾವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಂಠಿ ಮಾವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 11, 2010

ಮಾಡಿದ್ದು ಸಾಸಿವೆಕಾಳಿನಷ್ಟೂ ಅಲ್ಲ

ಮಾಡಿದ್ದು ಸಾಸಿವೆಕಾಳಿನಷ್ಟೂ ಅಲ್ಲ, ಆದರೆ ಅಂದು ಪಾಲ್ಗೊಂಡಿದ್ದ ಎಲ್ಲರ ಮನಸ್ಸಿನ ಮೇಲೆ ಅದೆಷ್ಟು ಪರಿಣಾಮ ಬೀರಿದೆ! ನಿಜಕ್ಕೂ ನಮ್ಮ ಕಂಠಿಮಾವನ ಮನೆಯ ಎಲ್ಲಾ ಮಕ್ಕಳೂ ಅಳಿಯಂದಿರು ಹೃದಯವಂತರು. ಅವರೆಲ್ಲರ ಪ್ರತಿನಿಧಿಯಾಗಿ ಶ್ರೀ ನಾರಾಯಣ ಸ್ವಾಮಿಯವರು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಮಾತುಗಳನ್ನೇ ಇಲ್ಲಿ ಓದಿ. ಕಂಠಿಮಾವನ ಮನೆಯ ಎಲ್ಲರ ಹೃದಯವಂತಿಗೆಯ ಮಾತುಗಳಿಗೆ ಏನು ಬೆಲೆ ಕಟ್ಟಲಿ?
ಹರಿಹರಪುರದೊಡನೆ ನಿಮ್ಮೆಲ್ಲರ ಸಂಬಂಧ ಹೀಗೆಯೇ ಇರಲೆಂದು ಬಯಸುತ್ತಾ
ನಿಮ್ಮ
-ಶ್ರೀಧರ

Dear Sri. Sridhar,


Pammi and myself are moved by the unrelenting efforts made in orgainising the function meticulously in a way unheard in recent days that too in this materialistic world where nuclear families are the order of the day. Much more is that you have made it all to see in the internet for those unfortunates who could not be present on that day.

The whole hearted participation by all of you under your guidance on that day was most touching and reminiscence of the nostlgia. The warmth in all of you made us to relish the moments throughout our life.

The way your family members and that of your co-brother's family participated whole heartedly and made the whole function a grand one is to be lauded.

I am happy, lucky and contented to be part of this great family of HRS and Parvathamma and get to know you all and look to other side of this great family.

I thank you once again for your great efforts and look forward for your future endeavours through this media and personal visits

Narayanaswamy B.S & Padma

ಬುಧವಾರ, ಸೆಪ್ಟೆಂಬರ್ 8, 2010

ಕಂಠಿಮಾವ

ಮಗಸೊಸೆ ,ಹೆಣ್ಣುಮಕ್ಕಳು ಮತ್ತು ಅಳಿಯಂದಿರೊಡನೆಳೊಡನೆ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಶ್ರೀಕಂಠಯ್ಯನವರು

ಅದೊಂದು ಭಾವಪೂರ್ಣ ದಿನ.ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀಕಂಠಯ್ಯನವರು ಮದುವೆಯಾಗಿ 60 ವರ್ಷಗಳ ಸವಿನೆನಪುಗಳ ಸ್ಮರಿಸುವ ಸುಂದರ ಸರಳ ಸಮಾರಂಭ. ಶ್ರೀಮತಿ ಪಾರ್ವತಮ್ಮನವರು ಹುಟ್ಟಿದ್ದು ಅವರಮ್ಮನ ತವರುಮನೆಯಾದ ಹರಿಹರಪುರದಲ್ಲಿ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸೀತು, ಪಾತು[ಪಾರ್ವತಮ್ಮ] ಮತ್ತು ಸುಬ್ರಾಮು ತಕ್ಷಣ ಆಸರೆ ಕಂಡದ್ದು ಸೋದರಮಾವನ [ನಾಗುಮಾವ] ಮನೆಯಲ್ಲಿ.ಇದೆಲ್ಲಾ 60-70 ವರ್ಷಗಳ ಹಿಂದಿನ ಮಾತು. ನಾಗುಮಾವ ನರಸಮ್ಮತ್ತೆ ಅವರದು ಬಲು ಬಡತನದ ಮನೆ. ಆದರೆ ಪ್ರೀತಿ ತುಂಬಿದ ಮನಸ್ಸು. ಅಷ್ಟು ಸಾಕಾಗಿತ್ತು ಅಂದಿನ ಸಂಕಷ್ಟದ ದಿನಗಳಲ್ಲಿ. ಅಂದು ನಾಲ್ಕು ದಿನ ಅಕ್ಕನ ಮಕ್ಕಳನ್ನು ಪ್ರೀತಿಯಿಂದ ಕಂಡ ನಾಗು ಮಾವನನ್ನು ಮಕ್ಕಳೆಲ್ಲಾ ಈಗಲೂ ನೆನಪು ಮಾಡಿಕೊಂಡು ಕಣ್ಣೀರಿಡುತ್ತಾರೆ. ನಾಗು ಮಾವ -ನರಸಮ್ಮತ್ತೆಯ ಭೌತಿಕ ದೇಹಗಳು ಈಗ ಇಲ್ಲ. ಅವು ಕಾಲನ ಕೈವಶವಾಗಿ ಹತ್ತು ವರ್ಷಗಳೇ ಕಳೆದಿವೆ. ಈಗ ಮನೆಯಲ್ಲಿ ನಾಗುಮಾವನ ಮಗ ಸುರೇಶನ ಕುಟುಂಬ ಇದೆ. ಅದೇ ಮನೆಯಲ್ಲಿ ಕಳೆದ 29.8.2010 ರಂದು ಭಾನುವಾರ ನಡೆಯಿತು ಒಂದು ಭಾವಪೂರ್ಣ ಸುಂದರ ಸಮಾರಂಭ. ಅಕ್ಷರಗಳಲ್ಲಿ ಬರೆಯುವ ಬದಲು ಅಂದಿನ ಒಂದಿಷ್ಟು ವೀಡಿಯೋ/ ಚಿತ್ರಗಳನ್ನು ನೋಡಿ. ವಿವರವಾಗಿ ಮುಂದೆ ಸಮಯವಾದಾಗ ಬರೆಯುವೆ.ನಡೆದ ಸುಂದರ ಸಮಾರಂಭದ ವೀಡಿಯೋ ಕ್ಲಿಪ್ ಗಳನ್ನು ಇಲ್ಲಿ ಪೇರಿಸುವ ಪ್ರಯತ್ನ ಮಾಡುವೆ. ಅಷ್ಟೂ ವೀಡಿಯೋ ಅಪ್ ಲೋಡ್ ಮಾಡಲು ಸಾಧ್ಯವಾಗದಿರಹುದು. ಎಷ್ಟು ಸಾಧ್ಯವೋ ಅಷ್ಟು ಪೇರಿಸುವೆ. ಇನ್ನು ಮುಂದೆ ನೋಡಿ, ನಿಮ್ಮ ಅಭಿಪ್ರಾಯಗಳನ್ನು ಮರೆಯದೆ ತಿಳಿಸಿ.
-ಹರಿಹರಪುರಶ್ರೀಧರ್

ಪುಷ್ಪಾಲಂಕೃತ ಶ್ರೀ ದುರ್ಗಾ ಪರಮೇಶ್ವರಿ ದೇವಿ



ಮಾಧವ ಕೃಷ್ಣ



ವೇ.ಬ್ರ.ಶ್ರೀ ಕೃಷ್ಣಮೂರ್ತಿಗಳೊಡನೆ ಶ್ರೀಕಂಠಯ್ಯನವರು


ಪ್ರಸನ್ನ ನಂಜುಂಡೇಶ್ವರ ಮತ್ತು ಶಂಕರಾಚಾರ್ಯರ ಸನ್ನಿಧಿ


ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ


ಮುದ್ದಾದ ಕೃಷ್ಣನ ಮೂರ್ತಿ


ಅಮ್ಮನೊಡನೆ ಮಂಜು


ಹಾಡು- ಶೃಂಗಪುರಾಧೀಶ್ವರೀ ಶಾರದೆ ಗಾಯಕಿ- ಶ್ರೀಮತಿ ಲಲಿತಾರಮೇಶ್

----------------------------------------------------------------------------------
ಎಲ್ಲಾಡಿ ಬಂದೆ ಎನ್ನ ರಂಗಯ್ಯ ನೀ ಎಲ್ಲಾಡಿ ಬಂದೆ ಎನ್ನ ಕೃಷ್ಣಯ್ಯ ಗಾಯಕಿ- ಶ್ರೀಮತಿ ಮಂಗಳಾ

----------------------------------------------------------------------------------
ಶ್ರೀ ದುರ್ಗಾಪರಮೇಶ್ವರೀ ಪೂಜೆ ಭಾಗ-1 [ಒಟ್ಟು 11 ಭಾಗಗಳಲ್ಲಿದೆ]


-----------------------------------------------------------------------------------
ಶ್ರೀ ದುರ್ಗಾಪರಮೇಶ್ವರೀದೇವಿಯ ಪೂಜಾವಿಧಾನವನ್ನು ಒಟ್ಟು 11 ಭಾಗಗಳಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಿಸಲಾಗಿದೆ. ಬ್ಲಾಗಿಗೆ ಪೇರಿಸಲು ಬಹಳ ಸಮಯಾವಕಾಶದ ಅಗತ್ಯವಿರುವುದರಿಂದ ಪ್ರತಿ ದಿನ ಒಂದೊಂದು ಭಾಗವನ್ನು ಅಪ್ಲೋಡ್ ಮಾಡುವೆ.ವೀಡಿಯೋ ದೃಶ್ಯವನ್ನು ಬ್ಲಾಗಿನಲ್ಲಿ ನೋಡುವುದಕ್ಕಿಂತಲೂ ಅದನ್ನು ಡೌನ್ ಲೋಡ್ ಮಾಡಿಕೊಂಡು ಡಿ.ವಿ.ಡಿ ಗೆ ವರ್ಗಾಯಿಸಿಕೊಂಡು ನೋಡಿದರೆ ಸಾಕ್ಷಾತ್ ದೇವಿಯ ಮುಂದೆ ಕುಳಿತು ಪೂಜೆಯನ್ನು ನೋಡಿದಂತಾಗುತ್ತದೆ.
-----------------------------------------------------------------------------------