ನನ್ಮಾತು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನನ್ಮಾತು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ನವೆಂಬರ್ 7, 2011

" ಹೊಸಬೆಳಕು"

ವೇದ ಆಧಾರಿತ ಸತ್ಯ ಸಂಪ್ರದಾಯಗಳತ್ತ ಬೆಳಕನ್ನು ಚಲ್ಲುವ ನೂತನ ದಾರಾವಾಹಿ ಇದೇ 13 ರಿಂದ  ಪ್ರತೀ ಭಾನುವಾರ ಬೆಳಿಗ್ಗೆ 9.30 ರಿಂದ 10.00ರ ವರಗೆ ಡಿಡಿ ಚಂದನದಲ್ಲಿ ಮೂಡಿಬರಲಿದೆ. ಅಣ್ಣ ತಂಗಿಯರ ಸಂವಾದ ರೂಪದ ಈ ದಾರಾವಾಹಿಯಲ್ಲಿ ಚಿತ್ರ ನಟಿ ವಿನಯ ಪ್ರಸಾದ್ ತಂಗಿಯ ಪಾತ್ರದಲ್ಲಿಯೂ ಹಾಗೂ ವೇದಾಧ್ಯಾಯೀ ಶ್ರೀ  ಸುಧಾಕರ ಶರ್ಮರು ಅಣ್ಣನ ಪಾತ್ರದಲ್ಲೂ ನಟಿಸಿದ್ದು ವೇದಕಾಲದ ಹಲವು ಸಂಪ್ರದಾಯಗಳನ್ನು ಪರಿಚಯಿಸಿ ಕೊಡಲಿದ್ದಾರೆ. ನೀವು ನಿಮ್ಮ ಬಂಧು ಮಿತ್ರರೊಡಗೂಡಿ ಈ ದಾರಾವಾಹಿಯನ್ನು ನೋಡಿ ,ನಿಮ್ಮ ಅಭಿಪ್ರಾಯಗಳನ್ನು\ಸಂದೇಹಗಳನ್ನು ವೇದಸುಧೆಗೆ  ಬರೆಯಿರಿ. ಶ್ರೀ ಶರ್ಮರು ನಿಮ್ಮ ಸಂದೇಹಗಳಿಗೆ ಉತ್ತರಿಸಲಿದ್ದಾರೆ.ನಿಮ್ಮ ಅಭಿಪ್ರಾಯಗಳ ಜೊತೆಗೆ ಶರ್ಮರ ಉತ್ತರವನ್ನೂ ಸಹ ವೇದಸುಧೆಯಲ್ಲಿ ಪ್ರಕಟಿಸಲಾಗುವುದು.

ಮಂಗಳವಾರ, ಸೆಪ್ಟೆಂಬರ್ 13, 2011

ವೇದಸುಧೆ ಡಾಟ್ ಕಾಂ

ಪ್ರಿಯ ಬಂಧುಗಳೇ 

"ನೆಮ್ಮದಿಗಾಗಿ " ಎಂಬ ಬ್ಲಾಗ್ ನಿಂದ ಆರಂಭಗೊಂಡ ನನ್ನ ಅಂತರ್ ಜಾಲ ಯಾತ್ರೆ  ಮುಂದುವರೆದಂತೆ ಸಂಪದದಲ್ಲಿ ಈಜಾಡಿ, "ವೇದಸುಧೆಯ "  ಆರಂಭಕ್ಕೆ ಕಾರಣವಾಗಿ  "ನಮ್ಮೂರು ನಮ್ಮನೆ"  ನಮ್ಮ  ಕೌಟುಂಬಿಕ  ಸಾಮರಸ್ಯಕ್ಕಾಗಿ ಶುರುವಾಗಿ  ಇದೀಗ   ಸ್ವಂತ ವೆಬ್ ಸೈಟ್  ಹೊಂದುವ ಹಂತ ತಲುಪಿದೆ. 
ಹೊಸದಾದ ಸ್ವಂತ ತಾಣ    vedasudhe.com  [ ವೇದಸುಧೆ ಡಾಟ್ ಕಾಂ] ಆರಂಭಗೊಂಡಿದೆ. ಇನ್ನೆರಡು ತಿಂಗಳಲ್ಲಿ  ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಗಳು ಮುಗಿದ ಮೇಲೆ ಅದರ ಬೆಳವಣಿಗೆಯ ಬಗ್ಗೆ   ಚಿಂತನ ಮಂಥನ ನಡೆಸಲಾಗುವುದು. ಮಿತ್ರ  ಪ್ರಸನ್ನ ಶಂಕರಪುರ  ಅದಕ್ಕೊಂದು ರೂಪ ಕೊಡುತ್ತಿದ್ದಾರೆ. ನೀವು ತಾಣವನ್ನು ಭೇಟಿಯಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು  

ಶುಕ್ರವಾರ, ಜುಲೈ 22, 2011

ಇಲ್ಲಿ ಮಾತನಾಡಬೇಕು

ಆತ್ಮೀಯ ಬಂಧುಗಳೇ,
ನನ್ನೊಡನೆ ಬರೆಯಲು ಶ್ರೀಮತಿ ವಿಜಯ ಶ್ರೀಕಂಠಮೂರ್ತಿ ಮತ್ತು ಹಿರಿಯರಾದ ಕವಿನಾಗರಾಜ್ ಜೊತೆಗಿದ್ದಾರೆ. ನಾನು ಗಮನಿಸಿದಂತೆ ಕಳೆದ ಒಂದುತಿಂಗಳಿಂದೀಚೆಗೆ ಸುಮಾರು ಒಂದು ಸಹಸ್ರಕ್ಕೂ ಹೆಚ್ಚು ಜನರು ಬ್ಲಾಗಿಗೆ ಬೇಟಿಕೊಟ್ಟಿದ್ದಾರೆ.ನಮ್ಮ ಬಂಧುಗಳಲ್ಲದ ಅನೇಕ ಅಭಿಮಾನಿಗಳೂ ಭೇಟಿ ಕೂಟ್ಟಿರಬಹುದು. ನಮ್ಮ ಬಂಧುಗಳು ಇಲ್ಲಿ ಮಾತನಾಡಬೇಕು. ಕನಿಷ್ಟ ಪಕ್ಷ ಒಂದು ಕಾಮೆಂಟ್ ಆದರೂ ಮಾಡಬೇಕು. ಕ್ಷೇಮ ಸಮಾಚಾರ ತಿಳಿಸಬೇಕು. ಕನ್ನಡದಲ್ಲಿ ಬರೆಯಲು ಬಾರದವರಿಗಾಗಿ ಕನ್ನಡ ಸ್ಲೇಟ್ ಕೊಟ್ಟಿರುವೆ. ಅದರೊಟ್ಟಿಗೆ ಯಾವ ಕನ್ನಡ ಅಕ್ಷರಕ್ಕೆ ಯಾವ ಇಂಗ್ಳೀಶ್ ಅಕ್ಷರ ಕುಟ್ಟಬೇಕೆಂಬ ಪಟ್ಟಿಯೂ ಇದೆ.ವಿಜಯ ಅವರಂತ ಮಹಿಳೆಯೊಬ್ಬರು ತಮ್ಮ ಕಛೇರಿ ಕೆಲಸಗಳು ಮತ್ತು ಗೃಹಕೃತ್ಯದ ಜೊತೆಗೇ ಈ ಬ್ಲಾಗ್ ನಲ್ಲಿ ಬರೆಯುವ ಗಂಭೀರ ಪ್ರಯತ್ನ ಮಾಡಿದ್ದಾರೆ.ಅವರು ನಮಗೆಲ್ಲಾ ಸ್ಪೂರ್ತಿಯಾಗಬೇಡವೇ? ಎರಡು ಮಾತು ಬರೆಯಿರಿ ಪ್ಲೀಸ್.

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು:ಖ ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ಚ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಈ ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ಈ ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

ಗುರುವಾರ, ಜುಲೈ 21, 2011

ಸಂಪಾದಕೀಯ

ಹರಿಹರಪುರದಲ್ಲಿ ಜನ್ಮ ತಾಳಿದ ಅಥವಾ ಹರಿಹರಪುರದ ಸಂಬಂಧ ಹೊಂದಿದ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಮಾಲಿಕೆ ಆರಂಭವಾಗಿದೆ. ಅದರ ಶುಭಾರಂಭವಾಗಿ ಶಿವಮೊಗ್ಗದಿಂದ ಶ್ರೀಮತಿ ವಿಜಯ ಶ್ರೀಕಂಠಮೂರ್ತಿಯವರು ಅವರ ತಂದೆ ಶ್ರೀ ಬಿ.ಎಸ್.ರಾಮಭಟ್ಟರ ಪರಿಚಯ ಲೇಖನವನ್ನು ಪ್ರಕಟಿಸಿದ್ದಾರೆ. ದಯಮಾಡಿ ಓದಿ ನಮ್ಮ ಸಂಬಂಧಿಕರಲ್ಲಿರುವ ಸಾಧಕರನ್ನು ಗುರುತಿಸೋಣ.ಗ್ರಾಮ ದೇವತೆ ಶ್ರೀದುರ್ಗಾಪರಮೇಶ್ವರಿಯು ಶ್ರೀ ರಾಮಭಟ್ಟರಿಗೂ ಅವರ ಕುಟುಂಬಕ್ಕೂ ಧೀರ್ಘಾಯುಷ್ಯವನ್ನೂ , ಆನಂದ ಆರೋಗ್ಯವನ್ನೂ ಕರುಣಿಸಲೆಂದು ಪ್ರಾರ್ಥಿಸುವೆ. ಸಾಧನೆ ಎಂದಾಗ ಹತ್ತಾರು ಗ್ರಂಥಗಳನ್ನು ಬರೆದಿರಬೇಕು, ಅತ್ಯಂತ ಉನ್ನತ ಹುದ್ಧೆಯಲ್ಲಿರಬೇಕು, ಎಂಬ ಭಾವನೆ ಏನೂ ಬೇಡ.ನಿಮ್ಮ ಕುಟುಂಬದಲ್ಲಿ ಯಾರಾದರೂ ಸಂಗೀತಗಾರರೇ, ಕ್ರೀಢಾಪಟುಗಳೇ, ನೃತ್ಯ ಕಲಾವಿದರೇ, ಉತ್ತಮ ಭಾಷಣಕಾರರೇ......ಯಾರನ್ನು ನಮ್ಮ ಬಂಧುಗಳಿಗೆ ಪರಿಚಯಿಸಬೇಕೆಂಬ ಆಸೆ ಇದೆಯೋ ಅವರಿಗೆಲ್ಲಾ ಸ್ವಾಗತವಿದೆ.
-ಹರಿಹರಪುರಶ್ರೀಧರ್

ಶುಕ್ರವಾರ, ಜುಲೈ 15, 2011

ಇಂದು ಗುರುಪೂರ್ಣಿಮಾ




ಇಂದು ಗುರುಪೂರ್ಣಿಮಾ. ಕಳೆದ ವರ್ಷ ಇದೇ ದಿನ ಹಾಸನದಲ್ಲಿ ಆರ್.ಎಸ್.ಎಸ್. ನ ಒಂದು ಶಾಖೆಯಲ್ಲಿ ಉತ್ಸವದ ನಿಮಿತ್ತ ನಾನು ಮಾಡಿದ ಭಾಷಣ ಇಲ್ಲಿದೆ.

ಸೋಮವಾರ, ಜುಲೈ 4, 2011

ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿ

ಆತ್ಮೀಯ ಬಂಧುಗಳೇ ,
ಈಗಾಗಲೇ ಬೆಂಗಳೂರು ವಾಸಿ ಬೆಳವಾಡಿ ನಾಗರಾಜ್, ಹರಿಹರಪುರದ ಶ್ರೀಕಂಠಯ್ಯನವರ ಪುತ್ರಿ ಪೂರ್ಣ ಮತ್ತು ಶಿವಮೊಗ್ಗದಿಂದ ವಿಜಯ ಶ್ರೀಕಂಠಮೂರ್ತಿ ಇವರುಗಳು ಈ ಬ್ಲಾಗ್ನಲ್ಲಿ ಬರೆಯಲು ಶುರುಮಾಡಿದ್ದಾರೆ. ಅವರಿಗೆಲ್ಲಾ ಅಭಿನಂದನೆಗಳು.ಉಳಿದೆಲ್ಲ ಬಂಧುಗಳೂ ಕೂಡ ಈ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಬೇಕೆಂಬುದು ನನ್ನಾಸೆ. ಕನ್ನಡದಲ್ಲಿ ಬರೆಯಲು ಕನ್ನಡ ಸ್ಲೇಟ್ ಈಗಾಗಲೇ ಬ್ಲಾಗ್ ನಲ್ಲಿದೆ. ಅದರ ಉಪಯೋಗ ಪಡೆಯಿರಿ. ನಿಮ್ಮ ಎರಡು ಮಾತು ಅದರಲ್ಲಿರಲಿ.ನಿಮ್ಮ ಮನೆಯ ಶುಭ ಸಮಾರಂಭಗಳ ವಿಚಾರ ಬರೆಯಿರಿ. ಮಕ್ಕಳ ಚಟುವಟಿಕೆ ಬಗ್ಗೆ ಅವರಿಂದಲೇ ಬರೆಸಿ. ಮಕ್ಕಳ ಹಾಡು-ಸಂಗೀತ, ಭಾಷಣ, ಪ್ರಬಂಧ ಇತ್ಯಾದಿ ವಿಚಾರಗಳ ಆಡಿಯೋ ಕ್ಲಿಪ್ ಗಳು, ಬರಹಗಳಿದ್ದರೆ ಬ್ಲಾಗ್ ನಲ್ಲಿ ಪ್ರಕಟಿಸಲುಕಳಿಸಿಕೊಡಿ . ನೀವು ಮಾಡಬೇಕಾದ್ದು ಇಷ್ಟೆ. ನನ್ನ ಈ ಮೇಲ್ ಗೆ ಒಂದು ಎರಡಕ್ಷರದ ಮೇಲ್ ಕಳಿಸಿ. ನಿಮ್ಮನ್ನು ಫಾಲ್ಲೋ ಮಾಡುವ ಹೊಣೆ ನನ್ನದು.
E-Mail: vedasudhe@gmail.com

ಶುಕ್ರವಾರ, ಜುಲೈ 1, 2011

ಕನ್ನಡದಲ್ಲಿ ಬರೆಯೋದ್ ಹ್ಯಾಗೆ ಅಂದ್ರಾ!

ನೀವೆಲ್ಲಾ ಏನಾದರೂ ಬರೀತೀರಿ ಅಂತಾ ಕಾದೆ.ಊಹೂ .ಇಲ್ಲ, ಬರೆಯಲಿಲ್ಲ. ಅದಕ್ಕಾಗಿ ನಾನು ಈಗ ಒಂದು ಪ್ಲಾನ್ ಮಾಡಿದ್ದೀನಿ. ಅಂಗಡಿಗೆ ಹೋಗಿ ಸ್ಲೇಟ್ ತಂದಿದ್ದೀನಿ. ಇಲ್ಲೇ ಈಮನೆಯ ಅತೀ ಕೆಳತುದಿಯಲ್ಲಿ ಇಟ್ಟಿದ್ದೀನಿ. ಅದರ ಜೊತೆಗೆ ಕನ್ನಡ ಬರೆಯೋದನ್ನು ಕಲಿಸಲು ಕನ್ನಡ ಮೇಸ್ಟ್ರು ಬೇರೆ ಇದಾರೆ.ನಿಮಗೆ ಬರೆಯ ಬೇಕೆನಿಸಿದ್ದನ್ನು ಕನ್ನಡ ಸ್ಲೇಟ್ ನಲ್ಲಿ ಬರೆಯಿರಿ. ಹೇಗೆ ಅಂದ್ರಾ! ಉಧಾಹರಣೆಗೆ ನೀವು ಪಾರ್ಥ ಅಂತಾ ಬರೆಯಬೇಕು. ಕೀಬೋರ್ಡ್ ನಲ್ಲಿ paartha ಅಂತಾ ಕುಟ್ಟಿ ಸಾಕು. ಅದನ್ನು ಕಾಪಿ ಮಾಡಿಕೊಂಡು ಯಾವುದೇ ಬರಹದ ಕೆಳಭಾಗದಲ್ಲಿರುವ ಕಾಮೆಂಟ್ ಕಾಲಂ ಚಿಟುಕಿಸಿ ಪೇಸ್ಟ್ ಮಾಡಿ. ಅಷ್ಟೇ. ನೋಡಿ ಟ್ರೈ ಮಾಡಿ. ನಾನೊಬ್ಬನೇ ಬರೀತಿದ್ರೆ ನಿಮಗೂ ಬೇಜಾರಾಗುತ್ತೆ. ಅದಿರಲಿ ನನ್ನ ಪೋನ್ ನಂಬರ್ ನೂ ನಿಮಗೆ ಕೊಡಲಿಲ್ಲಾ ಆಲ್ವಾ. ಈಗ ತಗೊಳ್ಳಿ. ಒಂದೆರಡು ಮಾತಾಡಿ ಪ್ಲೀಸ್.

LL: 08172-250566 Cell: ೯೬೬೩೫೭೨೪೦೬

ಮಂಗಳವಾರ, ಜೂನ್ 28, 2011

ಒಂದು ಮಾತು

ನನ್ನ ಒಂದು ಎಸ್.ಎಮ್.ಎಸ್ ನೋಡಿ ನಿನ್ನೆ ಮೊನ್ನೆ ಯಿಂದ ನೂರಾರು ಜನ ಬಂಧುಗಳು ನನ್ನ ಬ್ಲಾಗ್ ನೋಡಿರುವುದನ್ನು ಪಕ್ಕದಲ್ಲಿರುವ ಅಂಕಿ ಅಂಶಗಳು ತಿಳಿಸುತ್ತಿವೆ.ನೋಡಿದ ಮತ್ತು ನೋಡಿ ಉಳಿದ ಬಂಧುಗಳಿಗೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ನಮ್ಮೂರ ಸಂಬಂಧ ಹೊಂದಿರುವ ಎಲ್ಲಾ ಬಂಧುಗಳೂ ಬರೆಯ ಬೇಕೆಂಬುದು ನನ್ನ ಆಸೆ. ಎಲ್ಲರ ಮಧ್ಯೆ ಇದೊಂದು ಮಾಧ್ಯಮವಾಗಲೆಂಬ ಬಯಕೆ.ಉಡುಸಲಮ್ಮನ ಕೃಪೆಯಿಂದ ನನ್ನ ಮನೆಯ ಮೇಲೆ ಎರಡು ಅಂತಸ್ತು ಮನೆ ನಿರ್ಮಾಣವಾಗುತ್ತಿದೆ.ಬಹುಪಾಲು ನವಂಬರ್ ತಿಂಗಳಲ್ಲಿ ಅದರ ಗೃಹಪ್ರವೇಶ ನಡೆಯಲಿದೆ. ಆ ಸಮಯಕ್ಕಾದರೂ ನಮ್ಮ ಎಲ್ಲಾ ಬಂಧುಗಳು ನಮ್ಮ ಮನೆಗೆ ಬರಬೇಕೆಂಬುದು ನನ್ನಾಸೆ.ಅಷ್ಟೇ ಅಲ್ಲ ಪ್ರತಿವರ್ಷ ನಾವೆಲ್ಲಾ ಸೇರಬೇಕು.ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಪ್ರತಿಷ್ಟೆ ಬದಿಗಿಟ್ಟು ಹರಟಬೇಕು.ಈ ಉದ್ಧೇಶಕ್ಕಾಗಿಯೇ ಒಂದು ಫ್ಲೋರ್ ನಲ್ಲಿ ಪೂರ್ಣ ಹಾಲ್ ನಿರ್ಮಾಣವಾಗುತ್ತಿದೆ.ಅಲ್ಲಿ ಸತ್ಸಂಗಗಳು ನಡೆಯುತ್ತಿರಬೇಕೆಂಬುದು ಇಚ್ಛೆ.ಅದಕ್ಕೆ ಮುಂಚೆ ನಂಜಪ್ಪನವರ ಮಗ ಶ್ರೀಕಂಠಯ್ಯನವರ ಮಗಳು ಸೌಮ್ಯಳ ಮದುವೆ ಸಂದರ್ಭದಲ್ಲಿ ಎಲ್ಲಾ ಸೇರೋಣ.ಬ್ಲಾಗ್ ನಲ್ಲಿ ಓದಲು ತುಂಬಾ ಇದೆ.ತಾಳ್ಮೆ ಇದ್ದರೆ ನಾನು ಬರೆದಿರುವ ನಾಲ್ಕಾರು ಹಾಡುಗಳನ್ನು ಲಲಿತಳ ಕಂಠದಿಂದ ಕೇಳಬಹುದು. ವೇದಮಂತ್ರಗಳು ಅವುಗಳ ಅರ್ಥ ವ್ಯಾಖ್ಯಾನದ ಬಗ್ಗೆಯೂ ಧ್ವನಿ ಸುರುಳಿ ಹಾಕಿರುವೆ. ಕೆಲವು ಆಯ್ದ ಸಂಗೀತ ಗಳಿವೆ.ಬಿಡುವಾದಾಗಲೆಲ್ಲಾ ಈ ಬ್ಲಾಗ್ ಸಂಪರ್ಕದಲ್ಲಿರಿ.ನಿಮ್ಮ ಮೇಲ್ ವಿಳಾಸ ಕಳಿಸಿಕೊಟ್ರೆ ಈ ಬ್ಲಾಗ್ ನಲ್ಲಿ ನೀವು ಬರೆಯಲು ಅಧಿಕೃತವಾಗಿ ಆಹ್ವಾನಿಸುವೆ.ಎಲ್ಲರ ಮನೆಗೊಂದು ಪುಟ ಮೀಸಲಿಟ್ಟು ಅವರವರ ಮನೆಯ ಮದುವೆ-ಮುಂಜಿ-ಗೃಹಪ್ರವೇಶ ಅಥವಾ ಇನ್ಯಾವುದೇ ಸಮಾರಂಭಗಳ ಬಗ್ಗೆ ಬರೆಯಲು ಅನುಕೂಲ ಕಲ್ಪಿಸಲಾಗುವುದು .ನಾನು ಆರಂಭಿಸಿದ ಬ್ಲಾಗ್ ವೇದಸುಧೆಯನ್ನು ಈಗಾಗಲೇ 38 ಸಾವಿರಕ್ಕೂ ಹೆಚ್ಚುಜನರು ಇಣುಕಿದ್ದಾರೆ. ಅದು ಎಲ್ಲರಿಗಾಗಿ. ಈ ಬ್ಲಾಗ್ ನಮ್ಮ ಬಂಧುಗಳ ಸಮಾಚಾರಕ್ಕಾಗಿ.ನನ್ನ ಜೊತೆ ಕೈ ಜೋಡಿಸುವಿರಾ?
-ಹರಿಹರಪುರಶ್ರೀಧರ್

ಶನಿವಾರ, ಸೆಪ್ಟೆಂಬರ್ 11, 2010

ಶ್ರೀ ಸು.ರಾಮಣ್ಣನವರ ಭಾಷಣ

ಶ್ರೀ ಸು.ರಾಮಣ್ಣನವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು. ಭಾರತೀಯ ಕುಟುಂಬ ವ್ಯವಸ್ಥೆಯು ಶಿಥಿಲವಾಗುತ್ತಿರುವ ಕಾಲದಲ್ಲಿ ಕುಟುಂಬ ವ್ಯವಸ್ಥೆಯನ್ನು ಸದೃಢಗೊಳಿಸಿ ಭಾರತೀಯ ಪರಂಪರೆಯನ್ನು ಉಳಿಸುವ ಉದ್ಧೇಶದೊಡನೆ ಆರಂಭವಾಗಿರುವ "ಕುಟುಂಬ ಪ್ರಭೋಧನ್" ಆಂಧೋಳನದ ಅಖಿಲ ಭಾರತ ಪ್ರಮುಖರು. ಮೈಸೂರಿನವರಾದ ಶ್ರೀಯುತರು ಹಾಸನದ ಸಮೀಪ ಕೌಶಿಕ ಗ್ರಾಮದಲ್ಲಿ ಜಲೈ ಒಂದರಂದು ನನ್ನ ಮಿತ್ರ ಶ್ರೀ ಅನಂತನಾರಾಯಣ್-ಇವರ ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ಮಾಡಿದ ಭಾಷಣದ ಮುಖ್ಯ ಭಾಗ ಇಲ್ಲಿದೆ.


ನಮ್ಮ ಋಷಿಮುನಿಗಳು ಮತ್ತು ಆಧುನಿಕ ವಿಜ್ಞಾನಿಗಳು - ಒಂದು ಚಿಂತನೆ

ನಮ್ಮ ಋಷಿಮುನಿಗಳ ತಪಸ್ಸಿನ ಫಲ ಮತ್ತು ಆಧುನಿಕ ವಿಜ್ಞಾನಿಗಳ ಸಂಶೋಧನೆ ಪರಿಣಾಮ- ಒಂದು ಚಿಂತನೆ
ಅದೊಂದು ಶಿಸ್ತುಬದ್ಧ ಕಾರ್ಯಕ್ರಮ.ಹಾಸನದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಶ್ರೀ ಧನ್ವಂತರಿ ಮೂರ್ತಿ ಎದಿರು ನಿಂತು ಸಭೆಯನ್ನು ಒಮ್ಮೆ ವೀಕ್ಷಿಸಿದಾಗ ಕಣ್ ತುಂಬಿಬಂತು. ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂಧಿ, ಅಷ್ಟೇ ಅಲ್ಲ ಅಲ್ಲಿನ ರೋಗಿಗಳು ಮತ್ತು ಅವರ ಸಹಾಯಕರು, ಎಲ್ಲರೂ ಸದ್ಭಾವನೆಯನ್ನು ಹಂಚಿಕೊಳ್ಳಲು ಸೇರಿದ್ದ ಅಪೂರ್ವ ಸಮಾರಂಭ. ಎಲ್ಲವೂ ಶಿಸ್ತು ಬದ್ಧ. ಮುಖ್ಯ ಅತಿಥಿಯಾಗಿ ಆಹ್ವಾನಿತನಾಗಿದ್ದ ನನಗೆ ಹದಿನೈದು ನಿಮಿಷ ಮಾತನಾಡಲು ಅವಕಾಶ. ಮೊದಲು ಸುಶ್ರಾವ್ಯ ಪ್ರಾರ್ಥನೆ ಮತ್ತು ನನ್ನ ಭಾಷಣದ ನಂತರವೂ ಸಮೂಹ ಗೀತೆ. ಅಧ್ಯಕ್ಷರ ಭಾಷಣ. ನಂತರ ಪರಸ್ಪರ ಸದ್ಭಾವನೆಯ ಸಂಕೇತವಾಗಿ ರಕ್ಷಾ ಬಂಧನ.ಹೌದು, ಅಲ್ಲಿನ ವಾತಾವರಣದಿಂದ ರೋಮಾಂಚನವಾಗಿತ್ತು. ಆಗ ಭಗವತಿಯ ಅನುಗ್ರಹದಿಂದ ಹೊರಹೊಮ್ಮಿದ ಮಾತುಗಳು ವೇದಸುಧೆಯ ಅಭಿಮಾನಿಗಳ ಕಿವಿಗೂ ಮುಟ್ಟಲೆಂದು ಇಲ್ಲಿ ಪೇರಿಸಲಾಗಿದೆ.


"ಹೊಸಯುಕ್ತಿ-ಹಳೆ ತತ್ವದೊಡೆಗೂಡೆ ಸ್ವರ್ಗ" ಎಂಬ ಡಿವಿಜಿಯವರ ಮಾತನ್ನು ಆಚಾರದಲ್ಲಿ ತಂದದ್ದೇ ಆದರೆ ಸ್ವರ್ಗ ಇಲ್ಲೇ ನಿರ್ಮಾಣವಾಗಬಹುದಲ್ಲವೇ?
-ಹರಿಹರಪುರ ಶ್ರೀಧರ್