ಸೋಮವಾರ, ಸೆಪ್ಟೆಂಬರ್ 13, 2010

ಸಿರಿ ಭೂವಲಯ

ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ ೨೫-೩೦ ವರ್ಷಗಳಿಂದ ಸಂಶೋಧನೆ ಮಾಡ್ತಾ ಇದಾರೆ. ಅವರ ಮನೆಗೆ ಹೋಗೋಣ, ಯಾವಾಗ ಫ್ರೀ ಟೈಮ್ ಸಿಗುತ್ತೆ? ಹೇಳಿ "ಅಂದ. ಸರಿ ಮುಂದಿನ ಗುರುವಾರ ಭೇಟಿ ಮಾಡಲು ಫಿಕ್ಸ್ ಆಯ್ತು.ಈಮಧ್ಯೆ ನನ್ನ ಮಿತ್ರರಾದ ಸಾಹಿತ್ಯ ಸಂಶೋಧಕರಾದ ಡಾ ಶ್ರೀವತ್ಸ.ಎಸ್.ವಟಿ ಯವರು ನಿನ್ನೆ ಹಾಸನ ಆಕಾಶವಾಣಿಗೆ ರೆಕಾರ್ಡಿಂಗ್ ಗೆ ಬಂದಿದ್ದವರು ನಮ್ಮ ಮನೆಗೆ ಬಂದಿದ್ದರು. ಅವರೊಡನೆ ಅನೌಪಚಾರಿಕ ಮಾತುಕತೆ ನಡೆಸುವಾಗ ಅವರೊಡನೆ "ಸಿರಿಭೂವಲಯ" ದ ಬಗ್ಗೆ ಪ್ರಸ್ಥಾಪಿಸಿದೆ. ಅವರು ಆಗಾಗಲೇ ೪-೫ ವರ್ಷಗಳಲ್ಲೇ ತರಂಗ ಪತ್ರಿಕೆಯಲ್ಲಿ ಈ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ. ಅವರೊಡನೆ ನಡೆದ ಮಾತು ಕತೆ ವೇದಸುಧೆಯ ಅಭಿಮಾನಿಗಳಿಗಾಗಿ ಹಾಕಿರುವೆ. ಗುರುವಾರ ಶ್ರೀ ಸುಧಾರ್ಥಿಯವರೊಡನೆ ನಡೆಯುವ ಮಾತುಕತೆಯನ್ನೂ ಇಲ್ಲಿ ಅಪ್ ಲೋಡ್ ಮಾಡುವೆ. ಈ ಬಗ್ಗೆ ವೇದಸುಧೆಯ ಬಳಗದ ಇನ್ಯಾರಿಗಾದರೂ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ. ಬಹಳ ಅಪರೂಪವಾದ ಅದ್ಭುತವಾದ ಈ ಗ್ರಂಥದ ಪೀಠಿಕೆಯ ಪರಿಚಯ ಮಾಡುವುದರಲ್ಲೇ ೨೫-೩೦ ವರ್ಷದ ಸಂಶೋಧನೆ ಕಳೆದಿದೆ, ಅಂತಾರೆ, ಶ್ರೀ ವಟಿಯವರು. ಅವರ ಮಾತುಗಳನ್ನೇ ಕೇಳಿ.













ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿತೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.




ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya

3 ಕಾಮೆಂಟ್‌ಗಳು:

  1. ನಾನು ಮೊನ್ನೆ ಚೌತಿ ದಿನ ಊರಿಗೆ ಹೋಗಿದ್ದಾಗ ನನ್ನ ತಂದೆ ಸಿರಿಭೂವಲಯದ ಬಗ್ಗೆ ನಿನಗೆ ಗೊತ್ತೋ ಅಂತ ನನ್ನನ್ನು ಕೇಳಿದರು. ನಾನೆಲ್ಲೋ ಕೇಳಿದ್ದೆ ಅಷ್ಟೆ. ನನ್ನ ತಂದೆ ಹೈಸ್ಕೂಲ್ ನಲ್ಲಿ ಇದ್ದಾಗ ಅವರ ಕ್ಲಾಸ್ಮೇಾರೋ ಒಬ್ಬ ಒಂದು ದಪ್ಪದ ಪುಸ್ತಕ ಸಿರಿಭೂವಲಯ ಅಂತ ತಂದಿದ್ದನಂತೆ, ಆದರೆ ಆ ಸ್ನೇಹಿತ ಯಾರು ಎಂದು ಇಂದು ನನ್ನ ಅಪ್ಪನಿಗೆ ನೆನಪಿಲ್ಲ. ಅದ್ಯಾರು ಅಂತ ಗೊತ್ತಿದ್ದರೆ ಈಗಲಾದರೂ (ಅವರಿದ್ದರೆ)ಕೇಳಬಹುದಿತ್ತು ಎಂದು ನಾನು ಮತ್ತು ಅಪ್ಪ ಮಾತಾಡಿಕೊಂಡೆವು. ಇಂದು ಸಂಪದದಲ್ಲಿ ನಿಮ್ಮ ಲೇಖನ ನೋಡಿ ಸಂತೋಷವಾಯಿತು ಧನ್ಯವಾದಗಳು. ಭ್ಯಂತರವಿಲ್ಲದಿದ್ದರೆ ನನ್ನ ಈ ಮುಂದಿನ ಇ ಮೇಲ್ ವಿಳಾಸಕ್ಕೆ ನಿಮ್ಮ ಈ ಮೇಲ್ ವಿಳಾಸವನ್ನು ಕಳಿಸಬೇಕಾಗಿ ಕೋರಿಕೆ. ಇಂತು , ಅಜಕ್ಕಳ ಗಿರೀಶ ಭಟ್ giriajakkala@yahoo.co.in

    ಪ್ರತ್ಯುತ್ತರಅಳಿಸಿ
  2. ಸರ್ ನನಗೆ ಸಿರಿಭೂವಲಯ ಪುಸ್ತಕ ಬೇಕು ಎಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ...

    ಪ್ರತ್ಯುತ್ತರಅಳಿಸಿ
  3. ಮಾನ್ಯ, ರವಿಕುಮಾರ್ ರವರೆ, ನನಗೆ ತಿಳಿದೇ ರುವಂತೆ ಹಾಸನದ ಹಾಲುವಾಗಿಲು ಗ್ರಾಮದ ಸುಧಾರ್ಥಿ ಎಂಬ ಸಂಶೋದನಾಕಾರರು, ಈ ಬಗ್ಗೆ ಸಂಶೋಧನೆ ಮಾಡಿ ಗ್ರಂಥವನ್ನು ರಚನೆ ಮಾಡಿರುತಾರೆ

    ಪ್ರತ್ಯುತ್ತರಅಳಿಸಿ