ವೇದ ಆಧಾರಿತ ಸತ್ಯ ಸಂಪ್ರದಾಯಗಳತ್ತ ಬೆಳಕನ್ನು ಚಲ್ಲುವ ನೂತನ ದಾರಾವಾಹಿ ಇದೇ 13 ರಿಂದ ಪ್ರತೀ ಭಾನುವಾರ ಬೆಳಿಗ್ಗೆ 9.30 ರಿಂದ 10.00ರ ವರಗೆ ಡಿಡಿ ಚಂದನದಲ್ಲಿ ಮೂಡಿಬರಲಿದೆ. ಅಣ್ಣ ತಂಗಿಯರ ಸಂವಾದ ರೂಪದ ಈ ದಾರಾವಾಹಿಯಲ್ಲಿ ಚಿತ್ರ ನಟಿ ವಿನಯ ಪ್ರಸಾದ್ ತಂಗಿಯ ಪಾತ್ರದಲ್ಲಿಯೂ ಹಾಗೂ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಅಣ್ಣನ ಪಾತ್ರದಲ್ಲೂ ನಟಿಸಿದ್ದು ವೇದಕಾಲದ ಹಲವು ಸಂಪ್ರದಾಯಗಳನ್ನು ಪರಿಚಯಿಸಿ ಕೊಡಲಿದ್ದಾರೆ. ನೀವು ನಿಮ್ಮ ಬಂಧು ಮಿತ್ರರೊಡಗೂಡಿ ಈ ದಾರಾವಾಹಿಯನ್ನು ನೋಡಿ ,ನಿಮ್ಮ ಅಭಿಪ್ರಾಯಗಳನ್ನು\ಸಂದೇಹಗಳನ್ನು ವೇದಸುಧೆಗೆ ಬರೆಯಿರಿ. ಶ್ರೀ ಶರ್ಮರು ನಿಮ್ಮ ಸಂದೇಹಗಳಿಗೆ ಉತ್ತರಿಸಲಿದ್ದಾರೆ.ನಿಮ್ಮ ಅಭಿಪ್ರಾಯಗಳ ಜೊತೆಗೆ ಶರ್ಮರ ಉತ್ತರವನ್ನೂ ಸಹ ವೇದಸುಧೆಯಲ್ಲಿ ಪ್ರಕಟಿಸಲಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ