ಗುರುವಾರ, ಆಗಸ್ಟ್ 9, 2012

ನಾನು ರಚಿಸಿದ ಹದಿನಾಲ್ಕು ಹಾಡುಗಳು

ಇಲ್ಲಿ ಒಂದು ಪ್ಲಯರ್ ಇದೆ. ಅದರಲ್ಲಿ ನಾನು ರಚಿಸಿದ ಹದಿನಾಲ್ಕು ಹಾಡುಗಳಿವೆ. ಎಲ್ಲವನ್ನೂ ಲಲಿತಾ ಹಾಡಿದ್ದಾಳೆ. ಸಾಹಿತಿ ಚಂದ್ರಕಾಂತ ಪಡೆಸೂರರು ಹಾಡುಗಳ ವಿಮರ್ಷೆಯನ್ನು ಮಾಡಿದ್ದಾರೆ. ಪ್ಲಯರ್ ನಲ್ಲಿ ಹಾಡು ಕೇಳಲು ಪಕ್ಕದಲ್ಲಿರುವ ಮೆನು ಬಟನ್ ಮೇಲೆ ಕರ್ಜರ್ ತನ್ನಿ. ಬಟನ್ ಒತ್ತಿ. ಈಗ ಅದು ತೆರೆಯುತ್ತದೆ. ನಿಮಗೆ ಬೇಕಾದ ಹಾಡಿನ ಮೇಲೆ ಒತ್ತಿದರೆ ಹಾಡು ಕೇಳಬಹುದು. ಸ್ವಲ್ಪ ಕರ್ಜರ್ ಆಚೀಚೆ ಓಡಾಡಿಸಬೇಕಾಗುತ್ತದೆ.

ಸೋಮವಾರ, ಆಗಸ್ಟ್ 6, 2012

ಶ್ರೀಕಂಠನ ವಿವಾಹ




























ಶ್ರೀಕಂಠ ಹರಿಹರಪುರದ ನಮ್ಮ ಮನೆಯ ಮೊಮ್ಮಕ್ಕಳಲ್ಲಿ ಹಿರಿಯವನು.  ನಾವೆಲ್ಲರೂ ಹರಿಹರಪುರದಲ್ಲಿ ಒಟ್ಟಿಗೆ  ಸೇರಿದಾಗ ಶ್ರೀಕಂಠನಿಗೆ  ದೂರದ ಊರಿನಲ್ಲಿರುವ ಹೆಣ್ಣನ್ನು ಹುಡುಕು ಮಂಗಳ.  ನಮ್ಮ ಕುಟುಂಬದವರೆಲ್ಲರೂ ಒಟ್ಟಿಗೆ ಜಾಲಿಯಾಗಿ ಎಂಜಾಯ್‌ಮಾಡಿಕೊಂಡು ಹೋಗೋಣ ಎಂದು ಮಾತನಾಡಿಕೊಳ್ಲುತ್ತಿದ್ದೆವು.  ಕಾರಣ ಎಲ್ಲರೂ  ನಮ್ಮ ಕುಟುಂಬದಲ್ಲಿ ಹೆಣ್ಣಿನ ಮದುವೆಗೇ ಜಾಸ್ತಿ ಹೊಗುತ್ತಿದ್ದುದರಿಂದ ಶ್ರೀಕಂಠನ ಮದುವೆಯಲ್ಲಿ ಬೀಗರಾಗಿ ಖುಷಿಯಾಗಿ ಎಲ್ಲರೂ ಒಟ್ಟಿಗೆ ಹೋಗಬೇಕೆಂಬ ಆಸೆಯಿತ್ತು.

     ಆದರೆ ಶ್ರೀಕಂಠನಿಗೆ ಹುಡುಗಿ ಸಿಕ್ಕಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಇಬ್ಬರು ನನ್ನ ಮೈದುನರು ಇದ್ದಾರೆ. ಏನು ಮಾಡುವುದು? ಎಲ್ಲರೂ ಒಂದು ಕೆಲಸ ಮಾಡೋಣ ನಮ್ಮ ಫ್ಯಾಮಿಲಿಯವರೆಲ್ಲರೂ ಹಾಸನಕ್ಕೆ ಅವರವರ ವಾಹನದಲ್ಲಿ ಬಂದು ಇಲ್ಲೇ ವಾಹನ ನಿಲ್ಲಿಸಿ, ಒಟ್ಟಿಗೆ ಒಂದೇ ಬಸ್ಸಿನಲ್ಲಿ ಹೋಗುವುದು ಎಂದು ಮಾತಾಯಿತು.  ಮದುವೆಗೆಂದು ಮಂಗಳಾ ಶ್ರೀಧರ್ ಮನೆಯಲ್ಲಿ ನೆಂಟರಿಷ್ಟರು ಬಂದಿದ್ದರು.  ಎಲ್ಲರೂ ಮದುವೆ ಮನೆಯ ಸಂಭ್ರಮದಲ್ಲಿ ಮುಳುಗಿದ್ದೆವು.  ಶ್ರೀಧರ್‌ರವರು ಮದುವೆಯ ದೇವರ ಸಮಾರಾಧನೆ ದಿನದಿಂದ ಮುಂದಿನ ಅವನ ಮದುವೆ ಮುಗಿಸಿ ವಾಪಾಸ್ಸು ಬಂದು ಹಾಸನದಲ್ಲಿ  ರಿಸೆಪ್ಷನ್  ಮುಗಿಯುವವರೆಗೂ ಊಟ ತಿಂಡಿಗೆ ಅಡಿಗೆಯವರನ್ನು ನೇಮಿಸಿದ್ದುದರಿಂದ ಎಲ್ಲರೂ ಫ್ರೀಯಾಗಿ ಓಡಾಡಿಕೊಂಡಿದ್ದೆವು.

 ಶ್ರೀಕಂಠನ ಮದುವೆಯ ದೇವರ ಸಮಾರಾಧನೆ ಶುಕ್ರ್ರವಾರ ದಿನಾಂಕ:೦೩-೦೫-೨೦೧೨ ನಡೆಯಿತು. ಶನಿವಾರ ಮೆಹಂದಿ ಕಾರ್ಯಕ್ರಮ.  ಇಷ್ಟವಿದ್ದವರೆಲ್ಲಾ ಕೈಗೆ ಮೆಹಂದಿ ಹಾಕಿಸಿಕೊಂಡೆವು.  ಎಲ್ಲರೂ ಒಟ್ಟಿಗೆ ಅವನಿಗೆ ರೇಗಿಸಿಕೊಂಡು ಕಾಲ ಕಳೆದೆವು.  ಮರು ದಿನ ಬೆಳಿಗ್ಗೆ ಭಾನುವಾರ: ೫-೦೫-೨೦೧೨ ರಂದು ತಿಂಡಿ ತಿಂದು  ಬೆಳಿಗ್ಗೆ ೧೧.೦೦ ಗಂಟೆಗೆ ರಾಜಯೋಗ ಕಾಲದಲ್ಲಿ ಹಾಸನದಿಂದ  ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟೆವು.  ಎಷ್ಟು ಖುಷಿಯಾಗಿ ಎಂಜಾಯ್ ಮಾಡಿಕೊಂಡು ಬೆಂಗಳೂರು ತಲುಪಿದೆವು ಅಂದರೆ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು ಅದರ ಮಜ. ಬಸ್ಸಿನಲ್ಲಿ ಶ್ರೀಧರ, ಮಂಗಳ, ಶ್ರೀಕಂಠ, ಸುಬ್ರಹ್ಮಣ್ಯ, ನಾನು ಮತ್ತು ನಮ್ಮ ಮನೆಯವರು, ಶಾಮಣ್ಣ, ಗಿರಿಜ, ಲಲಿತ, ರಮೇಶ್, ನಾಗೇಶ್, ಉಮ ಹಾಗೂ ನಮ್ಮ ಅತ್ತೆ, ಶ್ರೀಧರ ಅವರ ಅಕ್ಕ ಭಾವಂದಿರು, ಅವರ ತಮ್ಮ, ತಮ್ಮನ ಮನೆಯವರು ಅವರ ಮಕ್ಕಳು ಹೀಗೆ ಹುಡುಗರು, ದೊಡ್ಡವರು, ವಯಸ್ಸಾದವರೆಲ್ಲರೂ ಒಟ್ಟಿಗೆ ಸೇರಿಕೊಂಡು ನಕ್ಕು ನಲಿದೆವು. ಇದರ ಕೆಲವು ಫೋಟೋ ಹಾಗು  ವೀಡಿಯೋ ಕ್ಲಿಪ್ಪನ್ನು ಈ ಲೇಖನದ ಜೊತೆಯಲ್ಲಿ ಹಾಕಿದ್ದೇನೆ.   ಬೆಂಗಳೂರು ಬಂದಿದ್ದು ನಮಗೆ ಗೊತ್ತಾಗಲೇ ಇಲ್ಲ.  ಮಧ್ಯ ಊಟಕ್ಕೆಂದು ಕುಣಿಗಲ್  ಹತ್ತಿರ  ನೀರಿರುವ ಜಾಗದಲ್ಲಿ ನಿಲ್ಲಿಸಿದ್ದು, ಹಾಸನದಿಂದಲೇ ಬಿಸಿಬೇಳೆಬಾತ್ ಮತ್ತು ಮೊಸರನ್ನ ತೆಗೆದುಕೊಂಡು ಹೋಗಿದ್ದೆವು.  ನಾವು ಊಟಕ್ಕೆಂದು ನಿಲ್ಲಿಸಿದ ಜಾಗದಲ್ಲಿ ಒಂದು ವೃದ್ಧಾಶ್ರಮ ಇತ್ತು.  ಅಲ್ಲಿ ಅವರಿಗೂ ಊಟವನ್ನು ಕೊಟ್ಟೆವು.  ಅಲ್ಲಿರುವ ವೃದ್ಧರ ಪರಿಸ್ಥಿತಿ ನೋಡಿ  ಮನಸ್ಸಿಗೆ ಬಹಳ ಬೇಜಾರಾಯಿತು.

ಬೆಂಗಳೂರಿನಲ್ಲಿ  ಮದುವೆ ಮನೆಗೆ ಸಂಜೆ ೪.೩೦ ಕ್ಕೆ ತಲುಪಿದೆವು.  ದಿನಾಂಕ: ೬-೦೫-೨೦೧೨ ರಂದು ಸೋಮವಾರ  ಶ್ರೀಕಂಠನ ಮದುವೆ ರಶ್ಮಿ ಜೊತೆಯಲ್ಲಿ. ಮದುವೆ ಮನೆಯಲ್ಲಿಯೂ ಸಹ ಎಲ್ಲರೂ ಖುಷಿಯಾಗಿ ಓಡಾಡಿಕೊಂಡು ಕಾಲ ಕಳೆದೆವು.  ಹುಡುಗಿಯ ಅಪ್ಪ ವೆಂಕಟೇಶ್ ಮತ್ತು ಅಮ್ಮ ಸಾವಿತ್ರಿ ನಮ್ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು.  ಚೆನ್ನಾಗಿ ಮದುವೆ ಮಾಡಿಕೊಟ್ಟರು. ಮದುವೆ ಮುಗಿಸಿಕೊಂಡು ಮರು ದಿನ  ಶ್ರೀಕಂಠ ಮತ್ತು ರಶ್ಮಿ ಮಂಗಳವಾರವಾದ ಕಾರಣ ಅಲ್ಲೇ ಬೆಂಗಳೂರಿನಲ್ಲಿ  ಉಳಿದಿದ್ದರಿಂದ ವಾಪಾಸ್ಸು ಹಾಸನಕ್ಕೆ ಬರುವಾಗ ನಮಗೆ ಮುಂಚೆ ಇದ್ದ ಖುಷಿ ಇರಲಿಲ್ಲ.  ಇದು ಶ್ರೀಕಂಠನ ಮದುವೆಗೆ ಹೋಗಿದ್ದ ನೆನಪಿನ ಒಂದು ಲೇಖನ.

       ವಿಜಯ ಶ್ರೀಕಂಠಮೂರ್ತಿ.