ಮಂಗಳವಾರ, ಸೆಪ್ಟೆಂಬರ್ 14, 2010

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ

ನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|
ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||

ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.

ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.

ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?

ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ