ಗುರುವಾರ, ಜೂನ್ 30, 2011

ಆತ್ಮೀಯರೇ,
ನಿನ್ನೆಯೆಲ್ಲಾ ಬ್ಲಾಗ್ ನಲ್ಲಿ ಏನೋ ತಾಂತ್ರಿಕ ತೊಂದರೆಗಳಿತ್ತು.ಇಂದೂ ಮುಂದುವರೆದಿತ್ತು.ಒಂದುವೇಳೆ ಆಡಿಯೋ ಕೇಳಲಾಗದಿದ್ದರೆ ದಯಮಾಡಿ ತಿಳಿಸಿ ಸರಿಪಡಿಸಲಾಗುವುದು
-ಶ್ರೀಧರ್

ಬುಧವಾರ, ಜೂನ್ 29, 2011

ಮನಮುಟ್ಟವ ಪತ್ರ

ಬೆಂಗಳೂರಿನಲ್ಲಿರುವ ಬೆಳವಾಡಿ ನಾಗರಾಜ್ ಅವರು ನಮ್ಮ ಪತ್ನಿಯ ದೊಡ್ಡಪ್ಪ ಶ್ರೀಕಂಠಯ್ಯನವರ ಪುತ್ರರು. ಅವರ ಮನಮುಟ್ಟವ ಪತ್ರ ಇಲ್ಲಿದೆ.
Dear Sridharji,
Naanu eshtu hottu nimma Namooru Nammane Namjana bloginalli sancharisuthidde alli Udasalammana darshana, Holenasipurada swamigala darshanavayithu, Haadu, Sageetha ellavannu Aalisuttha Santosha patte.

Abbha, Entha Olleya Kelasavannu maduthiddiri, ooru mane janada bagge nimagiruva Abhimana ellarigu maadari.
Abhimana, Sambhandagalu Kshinisuthiruva e Samayadalli Nimma Kaarya Shlaghaniya
Nimmantha Vicharavanthara, Abhimanigala sahavasa atyagatya.

Namma ooru belavadiyadaru Namma thande kaaladindalu namage hariharapurada bagge visheshavada sambhanda.
Adarallu namma anna Nanjundaswamige athi hechhu, idara bagge ennomme Mathanaadutthene.

Nagaraj B.S
9342101811


June 29, 2011

ಸಾಧನಾ ಪಂಚಕಮ್-ಭಾಗ -1


ತಿಪಟೂರಿನ ಚಿನ್ಮಯ ಕೃಷ್ಣ ಮಂದಿರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರಿಂದ ಶ್ರೀ ಶಂಕರಾಚಾರ್ಯರ ಶ್ರೇಷ್ಠ ಕೃತಿಗಳಲ್ಲಿ ಒಂದಾದ " ಸಾಧನಾ ಪಂಚಕಮ್ " ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ಒಂದು ಉಪನ್ಯಾಸಮಾಲೆಯು ನಿನ್ನೆಯಿಂದ ಆರಂಭವಾಗಿದೆ. ಸಾಧನಾಮಾರ್ಗದಲ್ಲಿರುವವರಿಗೆ ರಸದೂಟದಂತಿರುವ ಈ ಉಪನ್ಯಾಸವನ್ನು ಕೇಳಲೇ ಬೇಕು.ಸಾಧನಾಪಂಚಕಮ್ ನಲ್ಲಿ ಒಟ್ಟು ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸಾಧನಾ ಪಥದ ಮೆಟ್ಟಿಲುಗಳು. ಚೈತನ್ಯ ತುಂಬಿದ ಉಪನ್ಯಾಸವನ್ನು ಇಂದಿನಿಂದ ನೀವು ಕೂಡ ಇಲ್ಲಿ ಕೇಳಬಹುದು.

ಶ್ಲೋಕ ಮತ್ತು ಭಜನ್


ಸಾಧನ ಪಂಚಕಮ್ ಪರಿಚಯ



ಮೆಟ್ಟಿಲು-1
ವೇದೋ ನಿತ್ಯಮಧೀಯತಾಮ್



ಮೆಟ್ಟಿಲು-2+3
ತದುದಿತಂ ಕರ್ಮ ಸ್ವನುಷ್ಠೀಯತಾಮ್
ತೇನೇಶಸ್ಯ ಅಪಚಿತಿ: ವಿಧೀಯತಾಮ್



ಮೆಟ್ಟಿಲು-4+5+6
ಕಾಮ್ಯೇ ಮತಿಸ್ತ್ಯಜ್ಯತಾಮ್
ಪಾಪೌಘ: ಪರಿಧೂಯತಾಮ್
ಭವಸುಖೇ ದೋಷೋsನುಸಂಧೀಯತಾಮ್




ಪೂಜ್ಯ ಶ್ರೀ ಅದ್ವಯಾ ನಂದೇಂದ್ರ ಸರಸ್ವತೀ ಸ್ವಾಮೀಜಿಯವರು ನಮ್ಮನೆಗೆ ಕಾಲಿಟ್ಟಾಗ...



ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.




ಸ್ವಾಮೀಜಿಯವರೆದುರು ಹಾಡಿದ ಸಾಹಿತ್ಯ ಇಲ್ಲಿದೆ.
ಭ್ರಮೆ
ಇದು ನನ್ನ ಮನೆಯು
ಮನೆಯಲ್ಲಿ ಸಿರಿಯು
ಇದಕೆಲ್ಲ ನಾನೆ ಒಡೆಯ|
ಅದು ನಿನ್ನ ಭ್ರಮೆಯು
ಸಿರಿಗಿಲ್ಲ ನೆಲೆಯು
ಜಗಕೆಲ್ಲ ಆತ ಒಡೆಯ||

ನೀ ನಿರುವ ಮನೆಯ
ತಳಹದಿಯಲಿರುವ
ಕಲ್ಲನ್ನು ಕೇಳಿ ನೋಡು|
ಮನೆ ತುಂಬ ಇರುವ
ಮರಮುಟ್ಟುಗಳ
ಬಾಯಲ್ಲಿ ಕಥೆಯ ಕೇಳು||

ಜಗಕೆಲ್ಲ ಬೆಳಕ
ಕೊಡುವಂತ ರವಿಗೆ
ನಾನೆಂಬ ಗರ್ವವಿಲ್ಲ|
ಹಗಲೆಲ್ಲ ದುಡಿದು
ಕತ್ತಲೆಯ ರಾತ್ರಿಯಲಿ
ರವಿ ಮಾಯವಾದನಲ್ಲ||

ನಾನೆಂಬ ಭ್ರಮೆಯ
ತೊರೆದಾಗ ಗೆಳೆಯ
ನಿಜರೂಪ ಕಾಣಬಲ್ಲೆ|
ಹತ್ತಾರು ಜನರ
ಸ್ವತ್ತಾದ ನೀನು
ಮಾನವತೆಯ ಬೆಳೆಸ ಬಲ್ಲೆ||

ಮಂಗಳವಾರ, ಜೂನ್ 28, 2011

ಒಂದು ಮಾತು

ನನ್ನ ಒಂದು ಎಸ್.ಎಮ್.ಎಸ್ ನೋಡಿ ನಿನ್ನೆ ಮೊನ್ನೆ ಯಿಂದ ನೂರಾರು ಜನ ಬಂಧುಗಳು ನನ್ನ ಬ್ಲಾಗ್ ನೋಡಿರುವುದನ್ನು ಪಕ್ಕದಲ್ಲಿರುವ ಅಂಕಿ ಅಂಶಗಳು ತಿಳಿಸುತ್ತಿವೆ.ನೋಡಿದ ಮತ್ತು ನೋಡಿ ಉಳಿದ ಬಂಧುಗಳಿಗೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ನಮ್ಮೂರ ಸಂಬಂಧ ಹೊಂದಿರುವ ಎಲ್ಲಾ ಬಂಧುಗಳೂ ಬರೆಯ ಬೇಕೆಂಬುದು ನನ್ನ ಆಸೆ. ಎಲ್ಲರ ಮಧ್ಯೆ ಇದೊಂದು ಮಾಧ್ಯಮವಾಗಲೆಂಬ ಬಯಕೆ.ಉಡುಸಲಮ್ಮನ ಕೃಪೆಯಿಂದ ನನ್ನ ಮನೆಯ ಮೇಲೆ ಎರಡು ಅಂತಸ್ತು ಮನೆ ನಿರ್ಮಾಣವಾಗುತ್ತಿದೆ.ಬಹುಪಾಲು ನವಂಬರ್ ತಿಂಗಳಲ್ಲಿ ಅದರ ಗೃಹಪ್ರವೇಶ ನಡೆಯಲಿದೆ. ಆ ಸಮಯಕ್ಕಾದರೂ ನಮ್ಮ ಎಲ್ಲಾ ಬಂಧುಗಳು ನಮ್ಮ ಮನೆಗೆ ಬರಬೇಕೆಂಬುದು ನನ್ನಾಸೆ.ಅಷ್ಟೇ ಅಲ್ಲ ಪ್ರತಿವರ್ಷ ನಾವೆಲ್ಲಾ ಸೇರಬೇಕು.ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಪ್ರತಿಷ್ಟೆ ಬದಿಗಿಟ್ಟು ಹರಟಬೇಕು.ಈ ಉದ್ಧೇಶಕ್ಕಾಗಿಯೇ ಒಂದು ಫ್ಲೋರ್ ನಲ್ಲಿ ಪೂರ್ಣ ಹಾಲ್ ನಿರ್ಮಾಣವಾಗುತ್ತಿದೆ.ಅಲ್ಲಿ ಸತ್ಸಂಗಗಳು ನಡೆಯುತ್ತಿರಬೇಕೆಂಬುದು ಇಚ್ಛೆ.ಅದಕ್ಕೆ ಮುಂಚೆ ನಂಜಪ್ಪನವರ ಮಗ ಶ್ರೀಕಂಠಯ್ಯನವರ ಮಗಳು ಸೌಮ್ಯಳ ಮದುವೆ ಸಂದರ್ಭದಲ್ಲಿ ಎಲ್ಲಾ ಸೇರೋಣ.ಬ್ಲಾಗ್ ನಲ್ಲಿ ಓದಲು ತುಂಬಾ ಇದೆ.ತಾಳ್ಮೆ ಇದ್ದರೆ ನಾನು ಬರೆದಿರುವ ನಾಲ್ಕಾರು ಹಾಡುಗಳನ್ನು ಲಲಿತಳ ಕಂಠದಿಂದ ಕೇಳಬಹುದು. ವೇದಮಂತ್ರಗಳು ಅವುಗಳ ಅರ್ಥ ವ್ಯಾಖ್ಯಾನದ ಬಗ್ಗೆಯೂ ಧ್ವನಿ ಸುರುಳಿ ಹಾಕಿರುವೆ. ಕೆಲವು ಆಯ್ದ ಸಂಗೀತ ಗಳಿವೆ.ಬಿಡುವಾದಾಗಲೆಲ್ಲಾ ಈ ಬ್ಲಾಗ್ ಸಂಪರ್ಕದಲ್ಲಿರಿ.ನಿಮ್ಮ ಮೇಲ್ ವಿಳಾಸ ಕಳಿಸಿಕೊಟ್ರೆ ಈ ಬ್ಲಾಗ್ ನಲ್ಲಿ ನೀವು ಬರೆಯಲು ಅಧಿಕೃತವಾಗಿ ಆಹ್ವಾನಿಸುವೆ.ಎಲ್ಲರ ಮನೆಗೊಂದು ಪುಟ ಮೀಸಲಿಟ್ಟು ಅವರವರ ಮನೆಯ ಮದುವೆ-ಮುಂಜಿ-ಗೃಹಪ್ರವೇಶ ಅಥವಾ ಇನ್ಯಾವುದೇ ಸಮಾರಂಭಗಳ ಬಗ್ಗೆ ಬರೆಯಲು ಅನುಕೂಲ ಕಲ್ಪಿಸಲಾಗುವುದು .ನಾನು ಆರಂಭಿಸಿದ ಬ್ಲಾಗ್ ವೇದಸುಧೆಯನ್ನು ಈಗಾಗಲೇ 38 ಸಾವಿರಕ್ಕೂ ಹೆಚ್ಚುಜನರು ಇಣುಕಿದ್ದಾರೆ. ಅದು ಎಲ್ಲರಿಗಾಗಿ. ಈ ಬ್ಲಾಗ್ ನಮ್ಮ ಬಂಧುಗಳ ಸಮಾಚಾರಕ್ಕಾಗಿ.ನನ್ನ ಜೊತೆ ಕೈ ಜೋಡಿಸುವಿರಾ?
-ಹರಿಹರಪುರಶ್ರೀಧರ್

ಅಮೃತಾತ್ಮನು ನೀನು

ಈ ದೇಹ ನೀನೆಂದು ತಿಳಿದಿರುವೆ ನೀನು

ನಿಜತಿಳಿಯಬೇಕೇನು ದೇಹವಲ್ಲವು ನೀನು||

ಶಿಶುವಾಗಿ ಜನಿಸಿ ಬೆಳೆದು ಯೌವ್ವನ ಪಡೆದು

ವೃದ್ಧಾಪ್ಯದೆಡೆಗೆ ದಿನದಿನವು ಸಾಗಿ

ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?

ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||

ಮೊದಲು ಬಾಲ್ಯದ ಆಟ ನಡುನಡುವೆ ಹುಡುಗಾಟ

ಯೌವ್ವನವು ಕಾಲಿಡಲು ಸಂಸಾರದಾಟ|

ಆಡಿದವನಾರು? ಆಡಿಸಿದವನಾರು?

ಆಡುವಾ ದೇಹದೊಳು ಇರುವ ನೀನಾರು?

ನೀ ಹುಟ್ಟಲಿಲ್ಲ ತಾರುಣ್ಯ ನಿನದಲ್ಲ

ವೃದ್ಧಾಪ್ಯ ಬರಲಿಲ್ಲ ಸಾವೆಂಬ ಸುಳಿವಿಲ್ಲ|

ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ

ನೀನು ಚೈತನ್ಯವೇ ನೀನು ಅಮೃತಾತ್ಮನು ನೀನು||

ತೊಟ್ಟು ಕಿತ್ತ ಹೂ

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||

ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||

ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು


ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು|
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು||||


ಕಾಶ್ಮೀರವೇ
ಇರಲಿ, ಕನ್ಯಾಕುಮಾರಿಯಲಿ
ಜನ್ಮತಾಳಿದ ನಾವು ಎಂದೆಂದು ಒಂದು|
ವೇದ ಮಂತ್ರವಪಠಿಸಿ ,ಧರ್ಮಾರ್ಥಕಾಮದಲಿ
ಮುಂದೆನಡೆವೆವು ನಾವು ಧರ್ಮಸೂತ್ರದಲಿ||||


ಮಣ್ಣಿನಲಿ ಜನಿಸಿ, ದೇಶದಗಲದಿ ತಿರುಗಿ
ತಪವ ಮಾಡಿದ ಋಷಿಯ ಸಂತತಿಯು ನಾವು|
ತ್ಯಾಗಮಯ ಜೀವನದಿ ಸರಳಬದುಕನು ನಡೆಸಿ
ವಿಶ್ವದಲಿ ಎತ್ತರಕೆ ಮೆರದ ಜನ ನಾವು||||


ಶಂಕರರು ಮಧ್ವರು, ಬಸವ ರಾಮಾನುಜರು
ತೋರಿದಾ ದಾರಿಯಲಿ ಸಾಗುವೆವು ನಾವು|
ಎದುರಾಳಿ ಶತೃಗಳ ರಕ್ತತರ್ಪಣಮಾಡಿ
ಮೆರದ ವೀರರ ಜನ್ಮ ಸಾರ್ಥಕವ ಮಾಡಿ||||

ಸದ್ಭಾವನಾದಿನಾಚರಣೆ

ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ಸದ್ಭಾವನಾದಿನಾಚರಣೆಯಲ್ಲಿ ಪಾಲ್ಗೊಂಡಾಗ....



ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ



ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ|
ನಿನ್ನನಾರು ಬಹುಕಾಲ ಇರಬೇಡವೆಂದವರು|
ಇದ್ದರಿರಬೇಕು.......

ನಿನ್ನನೇ ತೇಯುತ್ತಾ ಕರಗಿಹೋಗುವೆ ನೀನು|
ಅಳಿಯುವಾಗಲು ಅಳದೆ ಕೊಡುವೆ ಶ್ರೀಗಂಧವನು|
ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ
ಸುಟ್ಟು ಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ|
ಇದ್ದರಿರಬೇಕು.......

ನಿನ್ನನೇ ಉರಿಸುತ್ತಾ ಕೊಡುವೆ ಬೆಳಕನ್ನು|
ನಿನ್ನನರಿಯದೆ ಆದೆ ಬಿರುಗಾಳಿ ನಾನು|
ಭೇದಭಾವ ಅರಿಯದ ಜ್ಯೋತಿ ನೀನು|
ನಿನ್ನ ಬೆಳಕಲಿ ಬದುಕು ಸವೆಸುವವ ನಾನು|
ಇದ್ದರಿರಬೇಕು.......


-----------------------------

ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾರಮೇಶ್