ನನ್ನ ಒಂದು ಎಸ್.ಎಮ್.ಎಸ್ ನೋಡಿ ನಿನ್ನೆ ಮೊನ್ನೆ ಯಿಂದ ನೂರಾರು ಜನ ಬಂಧುಗಳು ನನ್ನ ಬ್ಲಾಗ್ ನೋಡಿರುವುದನ್ನು ಪಕ್ಕದಲ್ಲಿರುವ ಅಂಕಿ ಅಂಶಗಳು ತಿಳಿಸುತ್ತಿವೆ.ನೋಡಿದ ಮತ್ತು ನೋಡಿ ಉಳಿದ ಬಂಧುಗಳಿಗೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ನಮ್ಮೂರ ಸಂಬಂಧ ಹೊಂದಿರುವ ಎಲ್ಲಾ ಬಂಧುಗಳೂ ಬರೆಯ ಬೇಕೆಂಬುದು ನನ್ನ ಆಸೆ. ಎಲ್ಲರ ಮಧ್ಯೆ ಇದೊಂದು ಮಾಧ್ಯಮವಾಗಲೆಂಬ ಬಯಕೆ.ಉಡುಸಲಮ್ಮನ ಕೃಪೆಯಿಂದ ನನ್ನ ಮನೆಯ ಮೇಲೆ ಎರಡು ಅಂತಸ್ತು ಮನೆ ನಿರ್ಮಾಣವಾಗುತ್ತಿದೆ.ಬಹುಪಾಲು ನವಂಬರ್ ತಿಂಗಳಲ್ಲಿ ಅದರ ಗೃಹಪ್ರವೇಶ ನಡೆಯಲಿದೆ. ಆ ಸಮಯಕ್ಕಾದರೂ ನಮ್ಮ ಎಲ್ಲಾ ಬಂಧುಗಳು ನಮ್ಮ ಮನೆಗೆ ಬರಬೇಕೆಂಬುದು ನನ್ನಾಸೆ.ಅಷ್ಟೇ ಅಲ್ಲ ಪ್ರತಿವರ್ಷ ನಾವೆಲ್ಲಾ ಸೇರಬೇಕು.ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಪ್ರತಿಷ್ಟೆ ಬದಿಗಿಟ್ಟು ಹರಟಬೇಕು.ಈ ಉದ್ಧೇಶಕ್ಕಾಗಿಯೇ ಒಂದು ಫ್ಲೋರ್ ನಲ್ಲಿ ಪೂರ್ಣ ಹಾಲ್ ನಿರ್ಮಾಣವಾಗುತ್ತಿದೆ.ಅಲ್ಲಿ ಸತ್ಸಂಗಗಳು ನಡೆಯುತ್ತಿರಬೇಕೆಂಬುದು ಇಚ್ಛೆ.ಅದಕ್ಕೆ ಮುಂಚೆ ನಂಜಪ್ಪನವರ ಮಗ ಶ್ರೀಕಂಠಯ್ಯನವರ ಮಗಳು ಸೌಮ್ಯಳ ಮದುವೆ ಸಂದರ್ಭದಲ್ಲಿ ಎಲ್ಲಾ ಸೇರೋಣ.ಬ್ಲಾಗ್ ನಲ್ಲಿ ಓದಲು ತುಂಬಾ ಇದೆ.ತಾಳ್ಮೆ ಇದ್ದರೆ ನಾನು ಬರೆದಿರುವ ನಾಲ್ಕಾರು ಹಾಡುಗಳನ್ನು ಲಲಿತಳ ಕಂಠದಿಂದ ಕೇಳಬಹುದು. ವೇದಮಂತ್ರಗಳು ಅವುಗಳ ಅರ್ಥ ವ್ಯಾಖ್ಯಾನದ ಬಗ್ಗೆಯೂ ಧ್ವನಿ ಸುರುಳಿ ಹಾಕಿರುವೆ. ಕೆಲವು ಆಯ್ದ ಸಂಗೀತ ಗಳಿವೆ.ಬಿಡುವಾದಾಗಲೆಲ್ಲಾ ಈ ಬ್ಲಾಗ್ ಸಂಪರ್ಕದಲ್ಲಿರಿ.ನಿಮ್ಮ ಮೇಲ್ ವಿಳಾಸ ಕಳಿಸಿಕೊಟ್ರೆ ಈ ಬ್ಲಾಗ್ ನಲ್ಲಿ ನೀವು ಬರೆಯಲು ಅಧಿಕೃತವಾಗಿ ಆಹ್ವಾನಿಸುವೆ.ಎಲ್ಲರ ಮನೆಗೊಂದು ಪುಟ ಮೀಸಲಿಟ್ಟು ಅವರವರ ಮನೆಯ ಮದುವೆ-ಮುಂಜಿ-ಗೃಹಪ್ರವೇಶ ಅಥವಾ ಇನ್ಯಾವುದೇ ಸಮಾರಂಭಗಳ ಬಗ್ಗೆ ಬರೆಯಲು ಅನುಕೂಲ ಕಲ್ಪಿಸಲಾಗುವುದು .ನಾನು ಆರಂಭಿಸಿದ ಬ್ಲಾಗ್ ವೇದಸುಧೆಯನ್ನು ಈಗಾಗಲೇ 38 ಸಾವಿರಕ್ಕೂ ಹೆಚ್ಚುಜನರು ಇಣುಕಿದ್ದಾರೆ. ಅದು ಎಲ್ಲರಿಗಾಗಿ. ಈ ಬ್ಲಾಗ್ ನಮ್ಮ ಬಂಧುಗಳ ಸಮಾಚಾರಕ್ಕಾಗಿ.ನನ್ನ ಜೊತೆ ಕೈ ಜೋಡಿಸುವಿರಾ?
-ಹರಿಹರಪುರಶ್ರೀಧರ್
-ಹರಿಹರಪುರಶ್ರೀಧರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ