ಮಂಗಳವಾರ, ಜೂನ್ 28, 2011

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು


ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು|
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು||||


ಕಾಶ್ಮೀರವೇ
ಇರಲಿ, ಕನ್ಯಾಕುಮಾರಿಯಲಿ
ಜನ್ಮತಾಳಿದ ನಾವು ಎಂದೆಂದು ಒಂದು|
ವೇದ ಮಂತ್ರವಪಠಿಸಿ ,ಧರ್ಮಾರ್ಥಕಾಮದಲಿ
ಮುಂದೆನಡೆವೆವು ನಾವು ಧರ್ಮಸೂತ್ರದಲಿ||||


ಮಣ್ಣಿನಲಿ ಜನಿಸಿ, ದೇಶದಗಲದಿ ತಿರುಗಿ
ತಪವ ಮಾಡಿದ ಋಷಿಯ ಸಂತತಿಯು ನಾವು|
ತ್ಯಾಗಮಯ ಜೀವನದಿ ಸರಳಬದುಕನು ನಡೆಸಿ
ವಿಶ್ವದಲಿ ಎತ್ತರಕೆ ಮೆರದ ಜನ ನಾವು||||


ಶಂಕರರು ಮಧ್ವರು, ಬಸವ ರಾಮಾನುಜರು
ತೋರಿದಾ ದಾರಿಯಲಿ ಸಾಗುವೆವು ನಾವು|
ಎದುರಾಳಿ ಶತೃಗಳ ರಕ್ತತರ್ಪಣಮಾಡಿ
ಮೆರದ ವೀರರ ಜನ್ಮ ಸಾರ್ಥಕವ ಮಾಡಿ||||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ