ಇದು ನಮ್ಮ ವಂಶ ವೃಕ್ಷ.ನಮ್ಮ ಅಪ್ಪ ಅಮ್ಮ ಬದುಕಿದ್ದಾಗ ಅವರಿಂದ ಪಡೆದ ಮಾಹಿತಿಯಂತೆ ಆರು ತಲೆಮಾರುಗಳ ವಂಶವೃಕ್ಷ ನನ್ನ ಬಳಿ ಇದೆ.1790 ರಿಂದ ಸಿಗುವ ಮಾಹಿತಿಯಂತೆ ಕಳೆದ220 ವರ್ಷಗಳ ಮಾಹಿತಿ ಲಭ್ಯವಿದೆ.ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಇದಕ್ಕಿಂತ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ.ನಮ್ಮ ಪೂರ್ವಜರು ಹರಿಹರಪುರದ ಜೋಡೀದಾರರಾಗಿದ್ದರೂ ಸಹ ಗುರುತು ಸಿಗುವಂತ ಮಹತ್ಕಾರ್ಯ ಸಾಧಿಸಿರುವ ಬಗ್ಗೆ ಮಾಹಿತಿ ನನ್ನಲ್ಲಿಲ್ಲ.ಆದರೆ ನಮ್ಮ ಅಪ್ಪ-ಅಮ್ಮ ತಮ್ಮ ಬಡತನದಲ್ಲೂ ತಮ್ಮ ಅಕ್ಕ-ತಂಗಿಯರನ್ನು ಪ್ರೀತಿಯಿಂದ ಬೆಳೆಸಿದ ಬಗ್ಗೆ ನಮ್ಮ ಸೋದರತ್ತೆಯರಿಂದ ಒಂದಿಷ್ಟು ಮಾಹಿತಿ ಲಭ್ಯವಿದ್ದು ಅದರಿಂದ ನಮ್ಮ ಅಪ್ಪ ಅಮ್ಮನ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಅಪ್ಪ ಅಮ್ಮನ ಬಗ್ಗೆ ಮತ್ತೊಮ್ಮೆ ಬರೆಯುವೆ.ಅದಿರಲಿ. ಈ ವಂಶವೃಕ್ಷದ ಮೇಲೆ ಚಿಟುಕಿಸಿ ಅದನ್ನು ದೊಡ್ದದು ಮಾಡಿಕೊಂಡು ನೋಡಿ. ನನ್ನ ಒಡಹುಟ್ಟಿದವರ ವರಗೆ ಬರೆದು ಉಳಿದ ಅವರ ಕುಟುಂಬಗಳ ವಿವರ ಬರೆದಿಲ್ಲ. ನನ್ನ ಅಕ್ಕ ತಂಗಿಯರ ಬಗ್ಗೆ ಬರೆಯ ಬಹುದು. ಆದರೆ ಅವರ ಮಕ್ಕಳು/ಅಳಿಯಂದಿರು/ಸೊಸೆಯರು/ಮೊಮ್ಮಕ್ಕಳ ಬಗ್ಗೆಯೂ ವಿವರಗಳನ್ನು ಅವರವರೇ ಬರೆಯಲೆಂಬುದು ನನ್ನಾಸೆ. ಅಂತೆಯೇ 1790 ರ ವರ್ಷದಲ್ಲಿ ನಮ್ಮ ಪೂರ್ವಿಕರಾದ ನಾರಣಪ್ಪನವರಿಂದ ನನಗೆ ವಿವರ ಲಭ್ಯವಿದೆ. ಆದರೆ ಅದಕ್ಕೆ ಒಂದೆರಡು ತಲೆಮಾರುಗಳ ಹಿಂದೆ ದಿ||ನಂಜಪ್ಪನವರ ಪೂರ್ವಿಕರ ವಿವರ ಸಿಕ್ಕರೆ ಅವರಿಗೂ ನಮ್ಮ ಪೂರ್ವುಕರೂ ಎಲ್ಲೋ ಒಂದುಕಡೆ ಒಂದು ಕುಟುಂಬಕ್ಕೆ ಸೇರುತ್ತಾರೆ. ಆಬಗ್ಗೆ ನಂಜಪ್ಪನವರ ಮನೆಯ ಹಿರಿಯರು ಮಾಹಿತಿ ಕೊಡಬೇಕು. ಈ ಪ್ರಯತ್ನ ಮಾಡಿದರೆ ಮುಂದಿನ ಪೀಳಿಗೆ ನಮ್ಮ ಪೂರ್ವಿಕರ ಬಗ್ಗೆ ಒಂದಿಷ್ಟು ಮಾಹಿತಿಯಾದರೂ ಲಭ್ಯವಾದೀತು.
ನಮ್ಮ ಬಂಧುಗಳು ಯಾರ್ಯಾರು ನಮ್ಮ ವಂಶವೃಕ್ಷದಲ್ಲಿ ಸೇರ್ಪಡೆಯಾಗಿದ್ದಾರೋ ಅವರುಗಳು ಅವರ ಮಕ್ಕಳು ಮೊಮ್ಮಕ್ಕಳ ವಿವರ ಕೊಟ್ಟರೆ ವಂಶವೃಕ್ಷ ಪೂರ್ಣಗೊಳಿಸಿ ಅದನ್ನು ಒಂದು ಅಶ್ವತ್ಥವೃಕ್ಷದಂತೆ ವಿಸ್ತರಿಸಬಹುದು. ಮುಂದೊಂದುಕಾಲಕ್ಕೆ ಅದು ಮುಂದಿನ ಪೀಳಿಗೆಗೆ ನೆರವಾದೀತು. ಅಲ್ಲದೆ ನಮ್ಮ ಊರಿನ ಎಲ್ಲರೂ ತಮ್ಮ ತಮ್ಮ ಮನೆಯ ವಂಶವೃಕ್ಷವನ್ನು ಸಿದ್ಧಪಡಿಸಿ ಕಳುಹಿಸಿದರೆ ಇಲ್ಲಿ ಪ್ರಕಟ ಮಾಡುವೆ. ಎಲ್ಲರೂ ಕೈ ಜೋಡಿಸಬೇಕೆಂಬುದು ನನ್ನ ಕಳಕಳಿಯ ಮನವಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ