ಶನಿವಾರ, ಸೆಪ್ಟೆಂಬರ್ 11, 2010

ಆನ್ ಲೈನ್ ಪೂಜೆ


ಪ್ರತಿವರ್ಷ ಗಣೇಶನ ಹಬ್ಬದಲ್ಲಿ ಆ ಜೋಯಿಸರು ಬಂದರೆ ತುಂಬಾ ಗಡಿಬಿಡಿ ಆಗ್ತಿತ್ತು. ಅದಕ್ಕಾಗಿಯೇ ಈ ಭಾರಿ ಈ-ಜೋಯಿಸರನ್ನು ಕರೆಸಿದ್ದೆ. ಇವರೇ ಎಲೆಕ್ಟ್ರಾನಿಕ್ ಜೋಯಿಸರು . ನಿಧಾನವಾಗಿ ಇವರ ಸ್ಪಷ್ಟ ಉಚ್ಛಾರಣೆಯ ಮಂತ್ರ ಕೇಳುತ್ತಾ ಗೌರಿ-ಗಣೇಶನ ವ್ರತವನ್ನು ಈ ಸಾರಿ ತಂಗಿ ಸ್ವರ್ಣಳ ಕುಟುಂಬದೊಡನೆ ಆನಂದವಾಗಿ ಆಚರಿಸಿದೆವು. ಈ ಭಾರಿ ವಿಶೇಷವೆಂದರೆ ನಮ್ಮ ಶ್ರೀಕಂಠ ನೆದರ್ ಲ್ಯಾಂಡ್ ನಲ್ಲಿಯೇ ಕುಳಿತು ಆನ್ ಲೈನ್ ಪೂಜೆಯಲ್ಲಿ ಪಾಲ್ಗೊಂಡ. ವ್ರತವು ಪೂರ್ಣ ಆಗುವರಗೂ ಆನ್ ಲೈನ್ ನಲ್ಲಿದ್ದು ಮಂಗಳಾರತಿ ಯನ್ನು ಸ್ವೀಕರಿಸಿದರೂ ತೀರ್ಥ ಪ್ರಸಾದ ತೆಗೆದುಕೊಳ್ಳಲಾಗಲಿಲ್ಲವಲ್ಲ! ಎಂಬ ಬೇಸರ ನಮಗೆ ಉಳಿದರೂ ಅವನೇನೂ ಬೇಸರಿಸಲಿಲ್ಲ. ಅವನಿಗೆ ಅವರತ್ತೆ ಭರವಸೆ ಕೊಟ್ಟಳು" ನೀನು ನವಂಬರ್ ನಲ್ಲಿ ಮದರ್ ಲ್ಯಾಂಡ್ ಗೆ ಬರ್ತೀಯಲ್ಲಾ! ಆಗ ಇವತ್ತು ಮಾಡಿರುವ ಎಲ್ಲಾ ಅಡಿಗೆಯನ್ನೂ ನಮ್ಮನೆಯಲ್ಲಿ ಮಾಡಿ ಬಡಿಸ್ತೀನಿ ಅಂತಾ . ಅಂತೂ ಆ ನೆಪದಲ್ಲಿ ತಂಗಿಮನೆಯಲ್ಲಿ ನವಂಬರ್ ನಲ್ಲಿ ಒಂದು ಬರ್ಜರಿ ಊಟ ನಮಗೂ ಗ್ಯಾರಂಟಿಯಾಯ್ತು. ಗಣಪತಿ ಹಬ್ಬದ ಒಂದು ಚಿಕ್ಕ ವೀಡಿಯೋ ನೋಡಿ. ನಿಮ್ಮ ಮನೆಯಲ್ಲಿ ಹಬ್ಬದ ಆಚರಣೆಯ ಚಿತ್ರಳಿದ್ದರೆ ದಯವಿಟ್ಟು ನನಗ ಮೇಲ್ ಮಾಡಿ ಬ್ಲಾಗ್ ನಲ್ಲಿ ಹಂಚಿಕೊಳ್ಳೋಣ. ನಿಧಾನವಾಗಿ ಮತ್ತೆ ಭೇಟಿಯಾಗೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ