ಸೋಮವಾರ, ಸೆಪ್ಟೆಂಬರ್ 13, 2010

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ



ನನ್ನ ರಚನೆಯನ್ನು ಶ್ರೀಮತಿ ಲಲಿತಾ ರಮೇಶ್ ಹಾಡಿದ್ದಾರೆ, ಕೇಳಿ, ನಿಮ್ಮ ಪ್ರತಿಕ್ರಿಯೆ ತಿಳಿಸಿ.

9 ಕಾಮೆಂಟ್‌ಗಳು:

  1. ಪ್ರಿಯ ಶ್ರೀಧರ್ ರವರೇ,
    ನಿಮ್ಮ ಕುಟುಂಬದ ಬ್ಲಾಗನ್ನು ನೋಡಿ ತುಂಬಾ ಸಂತಸವಾಯಿತು. ತುಂಬು ಕುಟುಂಬದ ಸವಿ ಇತ್ತೀಚೆಗೆ ಬಹುತೇಕ ಕಡೆ ಕಣ್ಮರೆಯೇ ಆಗಿಬಿಟ್ಟಿದೆ. ಅದಕ್ಕೆ ನಾನಾ ಕಾರಣಗಳು. ಆದಾಗ್ಯೂ ಬಂಧು-ಬಾಂಧವರನ್ನು ಬೆಸೆಯುವಲ್ಲಿ ತಮ್ಮ ಪ್ರಯತ್ನ (ನೇರವಾಗಿ ಮತ್ತು ಈ ಬ್ಲಾಗಿನ ಮೂಲಕ) ಅತ್ಯಂತ ಸ್ತುತ್ಯಾರ್ಹವಾದುದು. ಕುಟುಂಬದ ಹಿರಿಯರೊಂದಿಗೆ, ಸರೀಕರೊಂದಿಗೆ ಮತ್ತು ಮಕ್ಕಳೊಂದಿಗೆ ಬೆರೆತು ಕಳೆಯುವ ಮಧುರ ಕ್ಷಣಗಳಿಗಾಗಿ ಬಹುತೇಕ ಎಲ್ಲರ ಮನಸ್ಸೂ ಹಾತೊರೆಯುತ್ತಿರುತ್ತದೆ. ಅದಕ್ಕೊಂದು ಸಾಕಾರ ಕೊಡುವಲ್ಲಿ ನಿಮ್ಮ ಪಾತ್ರ ನಿಜಕ್ಕೂ ದೊಡ್ಡದು. ಶುಭವಾಗಲಿ. [ರಚನೆ ಮತ್ತು ಹಾಡು ಎರಡೂ ಚೆನ್ನಾಗಿವೆ. ಇಬ್ಬರಿಗೂ ಅಭಿನಂದನೆಗಳು]

    ಪ್ರತ್ಯುತ್ತರಅಳಿಸಿ
  2. ಶ್ರೀಧರ್ ಅವರೇ
    ತುಂಬಾ ಖುಷಿಯಾಯ್ತು
    ನಿಮ್ಮ ಹಾಡನ್ನು ಕೇಳಿ
    ನಿಮ್ಮ ಬ್ಲಾಗನ್ನು ನೋಡಿ
    ಕ್ರತಜ್ಞತೆಗಳು

    ಪ್ರತ್ಯುತ್ತರಅಳಿಸಿ
  3. ಶ್ರೀಸುರೇಶ್ ಮತ್ತು ಗೋಪಿನಾಥರಾವ್,
    ನಮಸ್ತೆ,
    ನಮ್ಮೂರಿನಲ್ಲಿ ಹುಟ್ಟಿ ಬದುಕಲು ಬೆಂಗಳೂರು ಸೇರಿರುವ ನೂರಾರು ಜನರಿದ್ದಾರೆ.ಅವರುಗಳ ಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ವಿದೇಶಗಳಿಗೆ ಹಾರಿದ್ದಾರೆ.ಇಂದಿನ ಪೀಳಿಗೆಗೆ ತಮ್ಮ ಮೂಲ ಮರೆಯಲು ಹಲವು ಅವಕಾಶಗಳು, ಕಾರಣಗಳು ಇವೆ.ಆದರೆ ಹುಟ್ಟೂರನ್ನು ನೆನಪಿಸಲು ಅವಕಾಶಗಳೇ ಕಮ್ಮಿ. ವೀಕ್ ಎಂಡ್ ಕಳೆಯಲು ಬೆಂಗಳೂರಿನಿಂದ ಸಕಲೇಶಪುರದ ಸುತ್ತಮುತ್ತ ಪ್ರಕೃತಿಯ ಮಡಿಲಿಗೆ ಬರುವ ನಮ್ಮ ಮಕ್ಕಳಿಗೆ ಹುಟ್ಟೂರಿನ ಬೆಟ್ಟ ಗುಡ್ಡಗಳ ಪರಿಚಯವಿಲ್ಲ.ಹೊರನಾಡು-ಶೃಂಗೇರಿಗೆ ದೇವರ ದರ್ಶನಕ್ಕೆ ಹೋಗುವ ನಮ್ಮ ಮಕ್ಕಳು ಬೇಲೂರಿನ ಚೆನ್ನಕೇಶವನನ್ನೂ ಮೀರಿಸುವ ನಮ್ಮೂರಿನ ಕೃಷ್ಣನ ಸುಂದರ ಮೂರ್ತಿಯನ್ನು ಕಂಡಿಲ್ಲ.ನಮ್ಮೂರಿನ ಶುದ್ಧ ನೀರು-ಗಾಳಿಯಿಂದ ವಂಚಿತರಾಗುತ್ತಿರುವ ನಮ್ಮ ಮಕ್ಕಳಿಗೆ ಅದರ ರುಚಿ ಪರಿಚಯಿಸಬೇಕೆಂಬ ಮಹದಾಸೆ. ಎಷ್ಟರ ಮಟ್ಟಿಗೆ ಸಫಲನಾಗುವೆನೋ ಗೊತ್ತಿಲ್ಲ. ಅಂತೂ ನಮ್ಮೂರ ಬ್ಲಾಗಿಗೆ ಬಂದ ನಿಮಗೆ ನಮ್ಮೂರಿಗೂ ಸ್ವಾಗತ.

    ಪ್ರತ್ಯುತ್ತರಅಳಿಸಿ
  4. ಅನಾಮಧೇಯಆಗಸ್ಟ್ 01, 2011

    sirimati lalitharamesh chennagi haadiddeera.edannu bareda harapura sridhar ge abinandanegalu.

    ಪ್ರತ್ಯುತ್ತರಅಳಿಸಿ
  5. ಒಂದು ಅಪೂರ್ವ ಆತ್ಮೀಯ ಅನುಭವ - ನಮ್ಮೂರು ನಮ್ಮನೆ ನಮ್ಮಜನ

    ಪ್ರತ್ಯುತ್ತರಅಳಿಸಿ
  6. ಹರಿಹರಪುರದ ಹೆಸರನ್ನು ಕೇಳಿದ್ದೇ ನಾವು ಹರಿಹರಪುರ ಶ್ರೀಮಠದ ಯತಿಗಳಾದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿಯವರ ಶ್ರೀ ಚಕ್ರ ಪೂಜೆಯನ್ನು ಕಂಡಾಗ!
    ಅಂತರ್ಜಾಲದಲ್ಲಿ ಸುಮ್ಮನೆ ಅತಂತ್ರವಾಗಿ ಅಲೆಯುತಿದ್ದಾಗ ಅಚಾನಕ್ಕಾಗಿ ಹೊಕ್ಕದ್ದು ಹರಿಹರಪುರದ ವೇದಸುಧೆಯ ಅಪರೂಪದ ಅರಮನೆಗೆ!
    ನಮ್ಮ ತಂದೆಯವರು ಯಾವಾಗಲೂ ಓದುತಿದ್ದ "Talks on Shankara's VIVEKA CHUDAMANI"-BY SWAMI CHINMAYANANDA ಆ ಪುಸ್ತಕ ಕಂಡಾಗಲೆಲ್ಲ ನಮ್ಮ ತಂದೆಯವರೇ ನನ್ನೆದುರಿನ chairನಲ್ಲಿ ಕುಳಿತು ಅಧ್ಯಯನ ಮಾಡುತ್ತಿರುವ ಅನುಭವ.
    ನಿಮ್ಮ ಬ್ಲಾಗಿನ ವಿವೇಕ ಚೂಡಾಮಣಿ ಓದುವ ಸಾಹಸ ನನ್ನದು ಈಗ!

    ಪ್ರತ್ಯುತ್ತರಅಳಿಸಿ
  7. ನಮ್ಮ ಪೂರ್ವ ಜನ್ಮದ ಪುಣ್ಯದಿಂದ ನಮ್ಮ ಊರಿಗೂ ಹರಿಹರಪುರ ಹೆಸರು ಬಂದಿದೆ. ಅದಕ್ಕೂ ಒಂದು ಶಾಸನದ ದಾಖಲೆ ಇದೆ. ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜರು ನಮ್ಮ ಊರನ್ನು ಮಾಧವಾಧ್ವರಿ ಎಂಬ ವೈದಿಕ ವಿದ್ವಾಂಸರಿಗೆ ದಾನವಾಗಿ ನೀಡಿದ ಶಾಸನವಿದೆ. ಆ ಬಗ್ಗೆ ಮುಂದೆ ಬರೆಯುವೆ. ಆದರೆ ನೀವು ತಿಳಿದಿರುವಂತೆ ಇದು ಶೃ೦ಗೇರಿ ಸಮೀಪದ ಹರಿಹರಪುರವಲ್ಲ.ನಿಮ್ಮ ಆಸಕ್ತಿಗೆ ಶರಣು. ನಿಮ್ಮ ಹೆಸರೇ ಹೇಳಿಲ್ಲವಲ್ಲಾ!

    ಪ್ರತ್ಯುತ್ತರಅಳಿಸಿ
  8. google search boxನಲ್ಲಿ ಮಾಧವಾಧ್ವರಿ ಎಂದು ಲಿಖಿಸುತ್ತಿದಂತೆ "ಸಂಪದದ "ಬ್ಲಾಗ್ ತೆರೆದುಕೊಂಡು ಹೊಳೆನರಸಿಪುರ ಸಮೀಪದ ಹರಿಹರಪುರದ ಇತಿಹಾಸ computer ಪರದೆಯ ಮೇಲೆ ಇಡಿಯಾಗಿ ಮೂಡಿತು .
    ತಮ್ಮ ಸಂಪದದ ಲೇಖನಕ್ಕಾಗಿ (19th Dec 2008) ಶ್ರೀಧರ್ ನಿಮಗೆ ನಮ್ಮ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  9. ನಿಮ್ಮ ಹೆಸರೇ ಹೇಳಿಲ್ಲವಲ್ಲಾ!

    ಪ್ರತ್ಯುತ್ತರಅಳಿಸಿ