ಸೋಮವಾರ, ಜುಲೈ 4, 2011

ವಿಜಯ ಮೂರ್ತಿ,ಶಿವಮೊಗ್ಗ

[ಕನ್ನಡದಲ್ಲಿ ಬರೆದ ಪತ್ರ ]

ಹರಿಹರಪುರ ಶ್ರೀಧರ್ ರವರಿಗೆ

ನಿಮ್ಮ ಸ್ವಂತ ಹೊಸ ಬ್ಲಾಗ್ ನಮ್ಮೂರು ನಮ್ಮನೆ ನಮ್ಮ ಜನ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ವಿಷಯ. ಹರಿಹರಪುರದ ಬಗ್ಗೆ ಸ್ಥಳ ಪರಿಚಯ, ಊರಿನ ಸಂಬಂಧ, ಅಲ್ಲಿನ ವಾತಾವರಣ, ಹಿಂದಿನ ೪೦-೫೦ ವರ್ಷಗಳ ನೆನಪಿನ ಬುತ್ತಿಯನ್ನು ಬ್ಲಾಗ್ನಲ್ಲಿ ನೆನಪಿಸಿಕೊಂಡು ತೆರೆದಿಟ್ಟಿದ್ದೀರಿ. ಇದರಿಂದ ನಮ್ಮ ಮನೆಯ ಹಳೆಯ ತಲೆಮಾರುಗಳ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತಿದೆ. ಹೀಗೆಯೇ ಇನ್ನು ಮುಂದು ಸಹ ಇಂಥಹ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಬಿ. ಆರ್. ವಿಜಯ,

ಹರಿಹರಪುರದ ದಿ. ರಾಮಚಂದ್ರಯ್ಯನವರ ಸೊಸೆ
------------------------------------------------

[ಮೊದಲ ಪ್ರಯತ್ನ ವಾಗಿ ಆಂಗ್ಲ ಅಕ್ಷರಗಳಲ್ಲಿ ಬರೆದದ್ದು ಹೀಗೆ.... ]

ಹರಿಹರಪುರದ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಹತ್ತಿರದಿಂದ ನೋಡುವ ಭಾಗ್ಯ ನಿಮ್ಮಿಂದ ದೊರಕಿತು . ಹಾಗು ತುಂಬಾ ಸಂತೋಷವಾಯಿತು . ಇದರೊಂದಿಗೆ ಲಲಿತಳು ಹೇಳಿದ ಶೃಂಗಪುರಾಧೀಶ್ವರೀ ಹಾಡು ಕೇಳಿ ಮನಸ್ಸಿಗೆ ಸಂತೋಷವಾಯಿತು . ನಾಗರಾಜ್ ಹರಿಹರಪುರದ ಬಗ್ಗೆ ಬರೆದ ಮೆಚ್ಚುಗೆ ಪತ್ರ . ಹೀಗೆ ಎಲ್ಲರೂ ಓದಿ ತಮ್ಮ ತಮ್ಮ ಅನಿಸಿಕೆಗಳನ್ನು ಬರೆದರೆ ಚೆನ್ನಾಗಿರುತ್ತದೆ. . ಧನ್ಯವಾದಗಳು . ಮುಂದೆ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುವೆ.


----------------------------------------------------------------
ಆತ್ಮೀಯ ಬಂಧುಗಳೇ ,
ಶ್ರೀ ಮತೀ ವಿಜಯಾ ಶ್ರೀಕಂಠಮೂರ್ತಿ ಯವರು[ ನನ್ನ ಪತ್ನಿಯ ಅತ್ತಿಗೆ] ಆಂಗ್ಲ ಅಕ್ಷರಗಳನ್ನುಪಯೋಗಿಸಿ ನನಗೆ ಮಾಡಿದ ಮೇಲ್ ನ್ನು ನಕಲು ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೀನಷ್ಟೇ. ಅದು ಕನ್ನಡದಲ್ಲೇ ಪ್ರಕಟವಾಗಿದೆ ತಾನೇ! ನೀವು ಮಾಡಬೇಕಾದ್ದೂ ಅಷ್ಟೇ. ನೀವು ಈ ಬ್ಲಾಗಿಗೆ ಅಧಿಕೃತವಾಗಿ ಲೇಖಕರಾದರೆ ಈ ಸ್ಥಳದಲ್ಲಿ ನೀವೂ ಕೂಡ ಇಂಗ್ಲೀಶ್ ಅಕ್ಷರದಲ್ಲೇ ಕನ್ನಡ ಬರೆಯಲು ಪ್ರಯತ್ನಿಸಿ. ಅದು ಕನ್ನಡದಲ್ಲೇ ಪ್ರಕಟವಾಗುತ್ತದೆ. ವಿಜಯ ಅವರ ಪತ್ರದಲ್ಲಿ ಕೆಲವು ಬರವಣಿಗೆ ದೋಷವಿದೆ. ಚಿಂತೆ ಇಲ್ಲ. ತಿದ್ದಿಕೊಳ್ಳಬಹುದು. ಆದರೆ ಅವರು ಮಾಡಿರುವ ಪ್ರಯತ್ನ ಮೆಚ್ಚಲೇ ಬೇಕಾದ್ದು.
-ಹರಿಹರಪುರ ಶ್ರೀಧರ್

1 ಕಾಮೆಂಟ್‌:

  1. ಬ್ಲಾಗ್ ನಲ್ಲಿ ಲೇಖಕರಾಗಿ ಬರೆಯಲು ಅಧಿಕೃತ ಆಹ್ವಾನ ಕಳಿಸಿರುವೆ. ಅದಕ್ಕೆ ಮೇಲ್ ನಲ್ಲಿ ಒಪ್ಪಿಗೆ ಸೂಚಿಸಿ ಬರೆಯಲು ಆರಂಭಿಸಿ. ನುಡಿಯಲ್ಲಿ ಬರೆಯುವುದರಿಂದ ಸರಿಯಾಗಿ ಪ್ರಕಟವಾಗದಿದ್ದರೆ ನಾನು ಸರಿಪಡಿಸುವೆ.ನಿಮ್ಮ ಲೇಖನಗಳಿಂದ ನಿಮ್ಮ ತಂದೆಯವರ ಬಗ್ಗೆ ನಮ್ಮ ಬಂಧುಗಳಿಗೆಲ್ಲಾ ತಿಳಿಯಲಿ.

    ಧನ್ಯವಾಗಳು,

    ಪ್ರತ್ಯುತ್ತರಅಳಿಸಿ