ಗುರುವಾರ, ಜುಲೈ 14, 2011

ನನ್ನ ನಾದಿನಿಮಂಗಳ

ಹರಿಹರಪುರದ ಶ್ರೀಧರ್ ಇವರ ‘ ನಮ್ಮೂರುನಮ್ಮಜನನಮ್ಮನೆ‘ ಬ್ಲಾಗ್‌ಗೆ ಅವರ ಪತ್ನಿಯಾದ ಶ್ರೀಮತಿ ಮಂಗಳ ಅಂದರೆ ನನ್ನ ನಾದಿನಿ ಬಗ್ಗೆ ನಾಲ್ಕು ಮಾತು ಬರೆಯಬೇಕು ಅಂತ ಅನ್ನಿಸುತ್ತಿದೆ.. ಅzಕ್ಕೆ ಬರೆಯುತ್ತಿದ್ದೇನೆ. ಶ್ರೀಮತಿ ಮಂಗಳ ಬಹಳ ಸಹನೆಯುಳ್ಳವಳು. ಅವಳ ಈ ಗುಣ ಎಲ್ಲರೂ ಮೆಚ್ಚಲೇಬೇಕಾದದ್ದು. ಹಾಗೂ ಸಾಕ್ಷಾತ್ ಅನ್ನಪೂರ್ಣೇಶ್ವರಿ. ಅವರ ಮನೆಗೆ ಸಂಬಂಧಿಕರಾಗಲೀ, ಸ್ವೇಹಿತರಾಗಲೀ ಅಥವಾ ಬೇರೆ ಯಾರೇ ಹೋಗಲಿ ಯಾರೂ ಅವರ ಮನೆಯಲ್ಲಿ ಊಟ ತಿಂಡಿ ಮಾಡದೇ ಯಾರೂ ಬರುವುದಿಲ್ಲ. ಯಾವ ಸಮಯದಲ್ಲಾದರೂ ಅವರ ಮನೆಗೆ ಹೋಗಲಿ ದಂಪತಿಗಳಿಬ್ಬರೂ ಸಹ ಆತ್ಮೀಯದಿಂದ ಬರಮಾಡಿಕೊಂಡು ಒಳ್ಳೆಯ ಆತಿಥ್ಯವನ್ನು ನೀಡುತ್ತಾರೆ. ಅವಳ ಮನೆಗೆ ಅವಳ ಅಣ್ಣತಮ್ಮಂದಿರು ಬಂದರೆ ಎಷ್ಟು ಸಂತೋಷಪಡುತ್ತಾಳೆ ಎಂದು ಹೇಳತೀರದು. ನಿನಗೆ ಇದು ಇಷ್ಟ, ಆ ತಿಂಡಿ ಮಾಡುತ್ತೇನೆ, ಇರು ಈ ದಿನ ಹೋಗಬೇಡ, ನಾಳೆ ಹೋಗುವಿಯಂತೆ ಎಂದು ಬಹಳ ಒತ್ತಾಯ. ಅವಳ ಸಹನಾಗುಣದಿಂದಲೇ ಅವಳ ಸಂಸಾರ ಚೆನ್ನಾಗಿದೆ. ಚಿನ್ನದಂತಹ ಎರಡು ಗಂಡು ಮಕ್ಕಳು. ಇಬ್ಬರೂ ಇಂಜಿನಿಯರ್. ಒಬ್ಬನು ನೆದರ್‌ಲ್ಯಾಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಇನ್ನೊಬ್ಬ ಬಿ.ಇ. ಎಂ.ಬಿ.ಎ ಆಗಿ ಕೆಲಸದ ಬೇಟೆಯಲ್ಲಿದ್ದಾನೆ. ಹೊಗಳಿಕೆ ಹೆಚ್ಚೇನೋ ಅಂತ ಅನ್ನಿಸಬಹುದು . ಅಲ್ಲ ಇದು ನಿಜವಾಗಲೂ ಪೂರ್ಣ ಸತ್ಯ. ಮಂಗಳನಂತಹ ಪತ್ನಿ ಸಿಕ್ಕಿದ್ದು ಶ್ರೀಧರ್‌ರವರ ಪುಣ್ಯ ಹಾಗೂ ಮಂಗಳಳಿಗೂ ಸಹ ಶ್ರೀಧರ್ ರವರಂತಹ ಬುದ್ಧಿಜೀವಿ, ಪ್ರಾಮಾಣಿಕ ಹಾಗೂ ವಿಚಾರವಂತರಾಗಿರುವ ಪತಿ ದೊರಕಿರುವುದು ಅವಳ ಪುಣ್ಯವೂ ಸಹ ಎಂದು ನನ್ನ ಅನಿಸಿಕೆ. ಹೀಗೆ ಅವರ ಸಂಸಾರ ಇನ್ನೂ ಉನ್ನತ ಮಟ್ಟಕ್ಕೇರಲಿ ಎಂದು ನಮ್ಮಿಬ್ಬರ ಹಾರೈಕೆ.
vijaya srikantamurthy

1 ಕಾಮೆಂಟ್‌:

  1. ನಿಮ್ಮ ಆತ್ಮೀಯ ನುಡಿಗಳು ನಮ್ಮ ಸಂಬಂಧವನ್ನು ಇನ್ನೂ ಗಟ್ಟಿಮಾಡುವುದರಲ್ಲಿ ಸಂಶಯವಿಲ್ಲ.ಬರೆಯಬೇಕೆಂಬ ನಿಮ್ಮ ಆಸಕ್ತಿಗಾಗಿ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ