ಶುಕ್ರವಾರ, ಜುಲೈ 8, 2011

humanity of police

ಹಿಂದಿನ ಐದಾರು ವರ್ಷದ ಮಾತು, ಈಗಲೂ ಆಗಾಗ ನೆನಪಿಸಿಕೊಳ್ಳುತ್ತೇನೆ. ನಮ್ಮ ಮಾವನವರಾದ ಬಿ. ಎನ್. ರಾಮಚಂದ್ರಯ್ಯನವರಿಗೆ ವಯಸ್ಸು ಸುಮಾರು ೮೭-೮೮ ವರ್ಷ ಆಗಿತ್ತು. ಅವರಿಗೆ ಹುಷಾರಿರಲಿಲ್ಲ. ಹಾಸನನಲ್ಲಿ ಮಂಗಳಶ್ರೀಧರ್ ಅವರ ಮನೆಗೆ ಹೋಗಿ ಡಾಕ್ಟರ್ ಹತ್ತಿರ ತೋರಿಸಿದ್ದು, ಹಾಸನದ ಡಾಕ್ಟರ್‌ರವರು ನಮ್ಮ ಮಾವನವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಒಂದು ಸಾರಿ ತೋರಿಸಿ ಎಂದು ಸಲಹೆ ಕೊಟ್ಟರು. ನಾನು, ನಮ್ಮ ಮನೆಯವರಾದ ಶ್ರೀಕಂಠಮೂರ್ತಿ, ನಮ್ಮ ಅತ್ತೆ, ಮಾವ ಹಾಗೂ ಶ್ರೀಧರ್‌ರವರು ಎಲ್ಲರೂ ಒಟ್ಟಿಗೆ ನಮ್ಮ ಕಾರಿನಲ್ಲಿ ಹಾಸನದಿಂದ ಬೆಂಗಳೂರಿಗೆ ಬೆಳಿಗ್ಗೆ ಹೊರಟೆವು. ಕಾರಿನಲ್ಲಿದ್ದ ನಮಗಾರಿಗೂ ಸೇಂಟ್ ಜಾನ್ಸ್ ಆಸ್ಪತ್ರೆಯ ಅಡ್ರೆಸ್ ಗೊತ್ತಿರಲಿಲ್ಲ. ನಮ್ಮ ಮಾವನವರಿಗೆ ತುಂಬಾ ಹೊತ್ತು ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಅನಿವಾರ್ಯವಾಗಿತ್ತು. ಬೆಂಗಳೂರಿಗೆ ಹೋದ ಮೇಲೆ ಕೇಳಿಕೊಂಡು ಹೋಗುತ್ತಾ ಒಂದು ಮೈನ್ ರೋಡ್‌ನ ಹತ್ತಿರ ಬಂದು ಟ್ರಾಫಿಕ್ ಪೋಲೀಸ್ ನವರ ಹತ್ತಿರ ಆಸ್ಪತ್ರೆಗೆ ಹೋಗುವ ದಾರಿಯನ್ನು ವಿಚಾರಿಸಿದೆವು. ಆ ರಸ್ತೆ ತುಂಬಾ ಬ್ಯುಸಿ. ಟ್ರ್ರಾಫಿಕ್ ಪೋಲೀಸ್ ನಮ್ಮ ಕಾರಿನೊಳಗೆ ಬಗ್ಗಿ ನೋಡಿ, ಯಾರಿಗೆ ಹುಷಾರಿಲ್ಲ ಎಂದು ಕೇಳಿ ನಮ್ಮ ಮಾವನವರನ್ನು ನೋಡಿ , ತಕ್ಷಣ ಆ ರಸ್ತೆಯಲ್ಲಿ ಬಂದ ಎಲ್ಲಾ ವಾಹನಗಳನ್ನು ತಡೆದು, ಆಸ್ಪತ್ರೆಯ ದಾರಿಯನ್ನು ಹೇಳಿ ನಮ್ಮ ಕಾರನ್ನು ಮೊದಲು ಹೋಗಲು ನಮಗೆ ಬಿಟ್ಟರು. ಪೋಲೀಸನವರಲ್ಲೂ ಎಂಥಹ ಮಾನವೀಯತೆ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಈ ಘಟನೆ ನನಗೆ ಆಗಾಗ ಮರುಕಳಿಸುತ್ತಿರುತ್ತದೆ. ನಂತರ ನಮ್ಮ ಮಾವನವರನ್ನು ಆಸ್ಪತ್ರೆಗೆ ಸೇರಿಸಿದೆವು. ನಮ್ಮ ಮಾವನವರು ಹುಷಾರಾಗಿ ನಂತರ ಎರಡು ವರ್ಷ ಬದುಕಿದ್ದರು. ಅವರ ವ್ಯಕ್ತಿತ್ವ ಇನ್ನೊಮ್ಮೆ ಈ ಬ್ಲಾಗಿನಲ್ಲಿ ಬರೆಯುತ್ತೇನೆ.
-ವಿಜಯ ಶ್ರೀಕಂಠಮೂರ್ತಿ

1 ಕಾಮೆಂಟ್‌:

  1. ನಿಜವಾಗಲೂ ನನಗೆ ಮರೆತೇ ಹೋಗಿತ್ತು. ನೆನಪುಮಾಡಿದ್ದು ಒಳ್ಳೆಯದಾಯ್ತು. ನಮಸ್ತೆ.

    ಪ್ರತ್ಯುತ್ತರಅಳಿಸಿ