ಭಾನುವಾರ, ಜುಲೈ 17, 2011

ಹರಿಹರಪುರದ ನಮ್ಮ ಮನೆಯ ಮುಂದುವರಿದ ಭಾಗ. . . . . .



ನನ್ನ ಚಿಕ್ಕ ನಾದಿನಿ ಲಲಿತಳ ಬಗ್ಗೆ ಎರಡು ಮಾತು ಬರೆಯದೆ ಇದ್ದರೆ ಲೇಖನ ಅಪೂರ್ಣವಾಗುತ್ತದೆ. ಲಲತ ರಮೇಶ್ ಈಗಾಗಲೇ ಶ್ರೀಧರ್‌ರವರ ವೇದಸುಧೆ ಬ್ಕಾಗ್‌ನಲ್ಲಿ ಅವರು ಬರೆದ ಕವನಗಳಗೆ ರಾಗ ಹಾಕಿ ಹಾಡಿದ್ದಾಳೆ. ಅವಳ ಹಾಡನ್ನು ಎಲ್ಲರೂ ಕೇಳಿರಬಹುದು. ಅವಳ ಕಿರು ಪರಿಚಯ. ಲಲಿತ ನಮ್ಮ ಮನೆಯಲ್ಲಿ ಎಲ್ಲರಿಗಿಂತಾ ಚಿಕ್ಕವಳು. ಎಲ್ಲರ ಪ್ರೀತಿಗೆ ಪಾತ್ರಳು. ಅವಳ ಸಂಸಾರ ಚಿಕ್ಕದಾದ ಚೊಕ್ಕ ಸಂಸಾರ. ಸಂಸಾರದಲ್ಲಿ ಬಲು ಜಾಣೆ. ಅವಳಿಗೆ ಒಬ್ಬ ಮಗಳು ಸಹನಾ. ಸಹನಾ ಎಂದರೆ ನಮ್ಮ ಮನೆಯವರಿಗೆಲ್ಲಾ ಬಹಳ ಅಚ್ಚುಮೆಚ್ಚು. ನಮ್ಮ ಮನೆತನದ ಮೊಮ್ಮಕ್ಕಳಲ್ಲಿ ಅವಳೊಬ್ಬಳೇ ಹೆಣ್ಣು ಹುಡುಗಿ. ಅವಳ ನಾಲ್ಕು ಜನ ಸೋದರಮಾವರಿಗಂತೂ ಅವಳನ್ನು ಕಂಡರೆ ಬಹಳ ಪ್ರೀತಿ. ಲಲಿತಳ ಪತಿ, ರಮೇಶ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ನಮ್ಮ ಮನೆಯ ಗಂಡು ಮಕ್ಕಳಲ್ಲಿ ಅವರೂ ಒಬ್ಬರು ಎಂದು ನನ್ನ ಭಾವನೆ. ನಮ್ಮ ಮನೆಯವರೆಲ್ಲರ ಜೊತೆ ಆತ್ಮೀಯವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ಕಷ್ಟ್ಲಸುಖಗಳಲ್ಲಿ ಭಾಗಿಯಾಗುತ್ತಾರೆ. ಸಂತೋಷಪಡುವ ವ್ಯಕ್ತಿ. ಈ ಹಿಂದೆಯೇ ಬರೆದಂತೆ, ನಾವೆಲ್ಲರೂ ಒಟ್ಟಿಗೆ ಸೇರಿದಾಗ ಮನೆಯಿಂದ ತಿಂಡಿ ಮಾಡಿಕೊಂಡು ಎಲ್ಲರೂ ವಿಹಾರಕ್ಕೆಂದು ಹೋಗುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಸಂತೋಷವನ್ನು ಹಂಚಿಕೊಳ್ಳುತ್ತೇವೆ. ಹೀಗೆ ನಮ್ಮೆಲ್ಲರ ಸಂಸಾರವನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ನಮ್ಮಿಬ್ಬರ ಪ್ರಾರ್ಥನೆ.
ಹರಿಹರಪುರದಲ್ಲಿದ್ದು, ಈಗ ಬೇರೆ ಕಡೆ ನೆಲೆಸಿರುವ ಉಳಿದ ಎಲ್ಲಾ ಫ್ಯಾಮಿಲಿಗಳು ಅವರವರ ಮನೆತನದ ಬಗ್ಗೆ ಬರೆದು ಭಾವನೆಗಳನ್ನು ಈ ಬ್ಲಾಗ್‌ನಲ್ಲಿ ಹಂಚಿಕೊಂಡರೆ ಚೆನ್ನಾಗಿರುತ್ತದೆ. ಎಲ್ಲರೂ ಒಂದೇ ಗೂಡಿನಲ್ಲಿದ್ದು ಬೇರೆ ಬೇರೆ ದಿಕ್ಕುಗಳಲ್ಲಿ ಹೇಗೆ ಹರಡಿಕೊಂಡಿದೆ ಎಂದು ಎಲ್ಲರಿಗೂ ಪರಿಚಯಿಸಿದ ಹಾಗೆ ಆಗುತ್ತದೆ ಎಂದು ನನ್ನ ಭಾವನೆ.
ಮುಂದಿನ ದಿನಗಳಲ್ಲಿ ಹರಿಹರಪುರದ ನಮಗೆ ಆತ್ಮೀಯರಾದ ವ್ಯಕ್ತಿಗಳ ಬಗ್ಗೆ, ಅವರ ವ್ಯಕ್ತಿತ್ವ ಹಾಗೂ ಅವರ ಬಗ್ಗೆ ನಮ್ಮ ಅನಿಸಿಕೆಗಳನ್ನು ಈ ಬ್ಲಾಗ್‌ನಲ್ಲಿ ಹಂಚಿಕೆಕೊಳ್ಳಲು ಪ್ರಯತ್ನಪಡುತ್ತೇವೆ.
ಇದಕ್ಕಿಂತ ಮೊದಲು ನಮ್ಮ ತಂದೆಯವರ ಕಿರು ಪರಿಚಯ ಹಾಗೂ ನಮ್ಮ ಬ್ಲಾಗ್‌ಗೆ ಏಕಸಂತೆ ಎಂದು ಏಕೆ ಇಟ್ಟುಕೊಂಡಿದ್ದೇನೆ ಎಂದು ಈ ಬ್ಲಾಗ್‌ನಲ್ಲಿ ಬರೆಯುತ್ತೇನೆ.



- ವಿಜಯ ಶ್ರೀಕಂಠಮೂರ್ತಿ.

1 ಕಾಮೆಂಟ್‌:

  1. ಲಲಿತಾ ರಮೇಶ್ ಬಗ್ಗೆ ಬರೆದಿದ್ದೀರಿ. ಅಗತ್ಯವಾಗಿತ್ತು.ನಿಜಕ್ಕೂ ನಮ್ಮ ಲಲಿತಾ ಮತ್ತು ರಮೇಶ್ ಬಗ್ಗೆ ನಾನು ಬರೆಯುವುದು ತುಂಬಾ ಇದೆ.ಸಮಯ ಒದಗಿದಾಗ ನಾನೇ ಬರೆಯುವೆ. ಹೇಗೂ ಜನ್ಮದಿನ ಬಂದೇ ಬರುತ್ತಲ್ಲಾ! ಜನ್ಮದಿನದ ಬಂಪರ್ ಕೊಡುಗೆಯಾಗಿ ಬರೆಯುವೆ.ಆದರೂ ಎರಡು ಮಾತು ಇಲ್ಲಿ ಸ್ಮರಿಸುವೆ.ರಮೇಶ ನನ್ನ ಸ್ವಂತ ತಮ್ಮನಿಗಿಂತಲೂ ಹೆಚ್ಚು. ನನ್ನ ಹಾಡುಗಳಿಗೆ ಜೀವ ತುಂಬಿದ ಖ್ಯಾತಿ ಲಲಿತಳಿಗೆ ಸಲ್ಲುತ್ತದೆ.ಅವಳು ಮನತುಂಬಿ ಹಾಡುವುದರಿಂದ ನಾನು ಹಾಡು ಬರೆಯುವ ಸಾಹಸ ಮಾಡಿದ್ದೇನೆ, ಅದರಲ್ಲಿ ನನಗೆ ತೃಪ್ತಿ ಇದೆ.ಸಹನಾ ನಮ್ಮೆಲ್ಲರಿಗೂ ಅಚ್ಚುಮೆಚ್ಚು. ಇಷ್ಟು ಈಗ ಸಾಕು.

    ಪ್ರತ್ಯುತ್ತರಅಳಿಸಿ