ಗುರುವಾರ, ಜುಲೈ 21, 2011

‘ ಏಕಸಂತೆ ‘


ನಮ್ಮ ತಂದೆಯವರಾದ ಬಿ.ಎಸ್. ರಾಮಭಟ್ಟರವರ ಪೂರ್ವಜರು, ಯಾರಾದರೂ ವೇದವನ್ನು ಒಂದು ಸಾರಿ ಹೇಳಿದ್ದನ್ನು ಕೇಳಿದರೆ, ಅದನ್ನು ಅದೇ ರೀತಿಯಲ್ಲಿ ಪುನರುಚ್ಛರಿಸುತ್ತಿದ್ದರಂತೆ. ಅದಕ್ಕೆ ಅವರ ಮನೆತನಕ್ಕೆ ‘ ಏಕಸಂತೆ ‘ ಎಂಬ ಪ್ರಶಸ್ತಿ ಬಂದಿತ್ತು ಎಂದು ಹೇಳುತ್ತಾರೆ. ಇದನ್ನು ( ಹನಸ್‌ಸಂತೆ ಎಂದೂ ಹೇಳುತ್ತಾರೆ ಎಂದು ಹೇಳಿದರು). ನಮ್ಮ ತಂದೆಯವರ ಅಣ್ಣನವರಿಗೆ ಏಕಸಂತೆ ನಾಗಾಭಟ್ಟ ಎಂದೇ ಹೆಸರಿತ್ತು.
ನಮ್ಮ ತಂದೆಯವರ “ ಏಕಸಂತೆ “ ಎಂಬ ವಿದ್ವಾಂಸರ ಮನೆತನದ ಪ್ರಶಸ್ತಿಯ ಹೆಸರನ್ನೇ ನಮ್ಮ ಬ್ಲಾಗ್‌ಗೆ ‘ ಏಕಸಂತೆ ‘ ಎಂದು ಹೆಸರಿಸಿದ್ದೇನೆ.
ವಿಜಯ ಶ್ರೀಕಂಠಮೂರ್ತಿ

1 ಕಾಮೆಂಟ್‌:

  1. ಶ್ರೀ ರಾಮಭಟ್ಟರ ಪೂರ್ವಜರ ಬಗ್ಗೆ ತಿಳಿದು ಸಂತೋಷಯವಾಯ್ತು.ನಮ್ಮ ಪೂರ್ವಜರ ಬಗ್ಗೆಯೂ ಹರಿಹರಪುರದ ಜನರಿಗೆ ಹೆಮ್ಮೆ ಇದೆ.ತಮ್ಮ ವೇದ ಪಾಂಡಿತ್ಯವನ್ನು ಮೆಚ್ಚಿ ವಿಜಯನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜರಿಂದ ನಮ್ಮೂರನ್ನು ದಾನವಾಗಿ ಪಡೆದ ಕೀರ್ತಿ ಮಾಧವಾಧ್ವರಿ ಎಂಬ ಬ್ರಾಹ್ಮಣನಿಗೆ ಸಲ್ಲುತ್ತದೆ. ಅಂತಹ ಊರಿನಲ್ಲಿ ನಮ್ಮ ಜನ್ಮವಾಗಿದೆ. ಅದಕ್ಕಾಗಿ ನಾವು ಎಷ್ಟು ಸತ್ಕಾರ್ಯ ಮಾಡಿದರೂ ಕಡಿಮೆಯೇ.

    ಪ್ರತ್ಯುತ್ತರಅಳಿಸಿ